ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಮದುವೆಗೆ ಹೊರಟಿದ್ದ ಒಂದೇ ಕುಟುಂಬದ ಆರು ಮಂದಿ ಸಾವು - ಆಟೋ - ಲಾರಿ ಡಿಕ್ಕಿ
12:22 January 29
ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಭೀಕರ ರಸ್ತೆ ಅಪಘಾತದಿಂದಾಗಿ ಮಸಣ ಸೇರುವಂತಾಗಿದೆ.
ಮೆಹಬೂಬಾಬಾದ್ (ತೆಲಂಗಾಣ):ಆಟೋಗೆ ಲಾರಿ ಗುದ್ದಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೂವರು ಮಹಿಳೆಯರು ಸೇರಿ ಆರು ಜನರು ಆಟೋದಲ್ಲಿ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದರು. ಆದರೆ ಮೆಹಬೂಬಾಬಾದ್ ಜಿಲ್ಲೆಯ ಗುಡೂರ್ ಮಂಡಲದ ಮರ್ರಿಮಿಟ್ಟಾ ಎಂಬ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಮದುವೆ ಮನೆ ಬದಲಾಗಿ ಅವರು ಮಸಣ ಸೇರುವಂತಾಗಿದೆ.
ಲಾರಿ ಚಾಲಕ ವೇಗವಾಗಿ ವಾಹನ ಚಲಾಯಿಸಿರುವುದೇ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.