ಕರ್ನಾಟಕ

karnataka

ETV Bharat / crime

ಕಚ್ಛಾ ಬಾಂಬ್​ ಸ್ಫೋಟ: ಬಿಜೆಪಿಯ ಆರು ಕಾರ್ಯಕರ್ತರಿಗೆ ಗಂಭೀರ ಗಾಯ - ಟಿಎಂಸಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹಿಂಸಾಚಾರ ಮುಂದುವರೆದಿದೆ. ಕಚ್ಛಾ ಬಾಂಬ್​ ಸ್ಫೋಟಗೊಂಡ ಪರಿಣಾಮ ಬಿಜೆಪಿಯ ಆರು ಮಂದಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

Six BJP workers injured in a crude bomb blast in West Bengal
ಕಚ್ಛಾ ಬಾಂಬ್​ ಸ್ಫೋಟಿಸಿ ಬಿಜೆಪಿ ಕಾರ್ಯಕರ್ತರಿಗೆ ಗಾಯ

By

Published : Mar 6, 2021, 10:01 AM IST

ಗೋಸಾಬಾ (ಪಶ್ಚಿಮ ಬಂಗಾಳ): ಕಚ್ಛಾ ಬಾಂಬ್​ ಸ್ಫೋಟಗೊಂಡು ಬಿಜೆಪಿಯ ಆರು ಮಂದಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ವಿಧಾನಸಭಾ ಚುನಾವಣೆಯ ಪ್ರಚಾರ ಅಬ್ಬರ ಜೋರಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಹಿಂಸಾಚಾರ ಮುಂದುವರೆದಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾದಲ್ಲಿ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಕಚ್ಛಾ ಬಾಂಬ್​ ಸ್ಫೋಟಗೊಂಡು ಆರು ಮಂದಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಕಚ್ಛಾ ಬಾಂಬ್​ ಸ್ಫೋಟಿಸಿ ಬಿಜೆಪಿ ಕಾರ್ಯಕರ್ತರಿಗೆ ಗಾಯ

ಇದನ್ನೂ ಓದಿ: ಜಮೀನು ವಿಚಾರಕ್ಕೆ ಘರ್ಷಣೆ: ಮೂವರು ಬಲಿ, ಯೋಧ ಅರೆಸ್ಟ್​

ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕಾರ್ಯಕರ್ತರು ನಮ್ಮ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಟಿಎಂಸಿ ತಳ್ಳಿಹಾಕಿದೆ.

ಇತ್ತೀಚೆಗಷ್ಟೇ ರಾಜ್ಯದ ಹಲವೆಡೆ ಕಚ್ಛಾ ಬಾಂಬ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details