ಮೇಘಾಲಯ: ಕರ್ನಾಟಕ, ಜಾರ್ಖಂಡ್ ಬಳಿಕ ಇದೀಗ ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ದುರಂತವೊಂದು ನಡೆದಿದ್ದು, ಆರು ಮಂದಿ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಪೂರ್ವ ಜೈನ್ತಿಯಾ ಬೆಟ್ಟದ ಬಳಿ ಇರುವ ದೀನ್‌ಶಲಾಲು ಎಂಬ ಪ್ರದೇಶದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗುಂಡಿಯೊಳಗೆ ಬಿದ್ದು ಅಸ್ಸಾಂ ಮೂಲದ ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರನ್ನು ಕರಿಮ್ಗಂಜ್ನ ಜಲಿಲ್ ಉದ್ದೀನ್ (25), ದಿಲ್ವಾರ್ ಹುಸೇನ್ (35), ಅಲಿ ಹುಸೇನ್ (40), ಮಾಕ್ಬುಲ್ ಹುಸೇನ್ ಹಾಗೂ ಸಿಲ್ಚಾರ್‌ನ ಅಬ್ದುಲ್ ಸಾಬರ್ (32) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಘೋಷಣೆ ಮಾಡಿದ ಸಿಎಂ
2014 ರಿಂದ ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಿಷೇಧಿಸಲಾಗಿತ್ತು. ಆದರೆ ಗಣಿಗಳನ್ನು ಮತ್ತೆ ತೆರೆಯುವಂತೆ ಸುಪ್ರೀಂಕೋರ್ಟ್ 2019ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. 2018ರಲ್ಲಿ ನಡೆದಿದ್ದ ಕಲ್ಲಿದ್ದಲು ಗಣಿ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದರು. ಇಂದಿನ ಘಟನೆ ಮತ್ತೆ 2018ರ ದುರಂತವನ್ನು ಮೇಘಾಲಯ ಜನತೆಗೆ ನೆನಪಿಸಿದೆ.
ಇದನ್ನೂ ಓದಿ:ಜಾರ್ಖಂಡ್: ಅಕ್ರಮ ಗಣಿಗಾರಿಕೆ ವೇಳೆ ನಾಲ್ವರ ದುರ್ಮರಣ
ನಿನ್ನೆ ರಾತ್ರಿಯಷ್ಟೇ ಕರ್ನಾಟಕದ ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲೆಟಿನ್ ತುಂಬಿದ್ದ ಲಾರಿ ಸ್ಫೋಟಿಸಿ ಐವರು ಕಾರ್ಮಿಕರು ಬಲಿಯಾಗಿದ್ದರು. ಈ ಘಟನೆ ಬೆನ್ನಲ್ಲೇ ಜಾರ್ಖಂಡ್ನ ಕೊಡರ್ಮಾ ಜಿಲ್ಲೆಯ ಫುಲ್ವೇರಿಯಾ ಪ್ರದೇಶದಲ್ಲಿರುವ ಅಭ್ರಕದ ಗಣಿಯಲ್ಲಿ ಕಾರ್ಮಿಕರ ಮೇಲೆ ಮಣ್ಣು ಕುಸಿದು ನಾಲ್ವರು ಮೃತಪಟ್ಟಿದ್ದರು.