ಕರ್ನಾಟಕ

karnataka

ETV Bharat / crime

ಶ್ರದ್ಧಾ ಕೊಲೆ ಪ್ರಕರಣ: ಅಫ್ತಾಬ್​​ಗೆ ಇಂದು ಮತ್ತೆ ಪಾಲಿಗ್ರಾಫ್​ ಪರೀಕ್ಷೆ - ಜೈಲು ಸಂಖ್ಯೆ ನಾಲ್ಕು

ಇನ್ನು ಅಫ್ತಾಬ್ ಸೆಲ್ ಮೇಲೆ ಕಣ್ಣಿಡಲು 13 ಸಿಸಿಟಿವಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗಿದೆ. ಇಂದು ಅಫ್ತಾಬ್​​ನನ್ನು ಮತ್ತೊಮ್ಮೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ರೋಹಿಣಿಯಲ್ಲಿ ಪಾಲಿಗ್ರಾಫ್ ಪರೀಕ್ಷೆಗೆ ಕರೆದೊಯ್ಯಲಾಗಿದೆ.

shraddha-walker-murder-case-accused-aaftab-under-special-watch-in-tihar-jail
ಶ್ರದ್ಧಾ ಕೊಲೆ ಪ್ರಕರಣ: ಅಫ್ತಾಬ್​​ಗೆ ಇಂದು ಮತ್ತೆ ಪಾಲಿಗ್ರಾಫ್​ ಪರೀಕ್ಷೆ

By

Published : Nov 28, 2022, 10:36 AM IST

ನವದೆಹಲಿ: : ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪಾಲಿಗ್ರಾಫ್ ಪರೀಕ್ಷೆಗಾಗಿ ರೋಹಿಣಿಗೆ ಕರೆತಂದಿದ್ದು, ಅದು ಇಂದು ಕೂಡ ಮುಂದುವರಿಯಲಿದೆ. ಕೋರ್ಟ್​​ಗೆ ಹಾಜರು ಪಡಿಸಿದ ಬಳಿಕ ಆರೋಪಿಯನ್ನು ಶನಿವಾರ ತಿಹಾರ್ ಜೈಲಿಗೆ ಕರೆದೊಯ್ಯಲಾಗಿತ್ತು.

ಇಲ್ಲಿ ಆತನ ಮೇಲೆ ವಿಶೇಷ ನಿಗಾ ಇರಿಸಲಾಗಿತ್ತು. ಸದ್ಯ ಅವರ ಆರೋಗ್ಯ ಚೆನ್ನಾಗಿದೆ. 14 ದಿನಗಳ ಬಂಧನದ ನಂತರ, ಅಫ್ತಾಬ್‌ನನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಜೈಲು ಸಂಖ್ಯೆ 4 ರಲ್ಲಿ ವಾರ್ಡ್ ಸಂಖ್ಯೆ 15ರ ಸೆಲ್ ಸಂಖ್ಯೆ 16 ರಲ್ಲಿ ಇರಿಸಲಾಗಿದೆ. ಇಲ್ಲಿಗೆ ಬಂದ ನಂತರ ಖೈದಿ ಸಂಖ್ಯೆ 11529 ಆಗಿದ್ದಾರೆ.

ಸಹಜವಾಗೇ ಇದ್ದ ಅಫ್ತಾಬ್​:ಜೈಲಿನ ಮೂಲಗಳಿಂದ ಅಫ್ತಾಬ್ ಬಗ್ಗೆ ಕೆಲವು ವಿಶೇಷ ವಿಷಯಗಳು ಹೊರಬಿದ್ದಿವೆ. ಶನಿವಾರ ಸಂಜೆ ಜೈಲಿಗೆ ತೆರಳಿದ ಅವರು ಮೊದಲ ರಾತ್ರಿ ಯಾವುದೇ ತೊಂದರೆಯಿಲ್ಲದೇ ಜೈಲಿನಲ್ಲೇ ಕಳೆದರು ಎಂದು ಹೇಳಲಾಗುತ್ತಿದೆ. ಭಾನುವಾರ ಬೆಳಗ್ಗೆ ಎದ್ದ ಅವರು ದಿನವಿಡೀ ಸಾಮಾನ್ಯ ರೀತಿಯಲ್ಲಿ ಜೈಲಿನಲ್ಲೇ ಇದ್ದರು. ಈ ಸಮಯದಲ್ಲಿ, ಅವರು ಮೊದಲ ಬಾರಿಗೆ ಜೈಲಿಗೆ ಬಂದಂತೆ ತೋರಲಿಲ್ಲ.

ಜೈಲು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಯಾವುದೇ ಖೈದಿ ಮೊದಲ ಬಾರಿಗೆ ಜೈಲಿಗೆ ಬಂದಾಗ, ಅವರ ಆರಂಭಿಕ ದಿನಗಳು ಉದ್ವಿಗ್ನತೆ ಮತ್ತು ತೊಂದರೆಯಿಂದ ತುಂಬಿರುತ್ತವೆ. ಆದರೆ, ಅಫ್ತಾಬ್ ಮುಖದಲ್ಲಿ ಅಂತಹ ಯಾವುದೇ ಭಾವ ಕಾಣುತ್ತಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹಾಗೂ ಜೈಲಿನ ಸಿಬ್ಬಂದಿ ಹೇಳಿದ್ದಾರೆ.

ಜೈಲು ಸಂಖ್ಯೆ ನಾಲ್ಕು:ಇಲ್ಲಿರುವ ಜೈಲು ಸಂಖ್ಯೆ ನಾಲ್ಕರಲ್ಲಿ, ಮೊದಲ ಬಾರಿಗೆ ಯಾವುದೇ ಅಪರಾಧದ ಆರೋಪ ಹೊತ್ತಿರುವ ಕೈದಿಗಳನ್ನು ಇರಿಸಲಾಗುತ್ತದೆ. ಅಪರಾಧದ ಹಾದಿಯನ್ನು ಅನುಸರಿಸದಿರುವಂತೆ ಹಾಗೂ ಭಯಾನಕ ಅಪರಾಧಿಗಳ ಸಹವಾಸದಿಂದ ಅವರನ್ನು ದೂರವಿರಿಸಲು ಈ ರೀತಿ ಮಾಡಿಕೊಂಡು ಬರಲಾಗುತ್ತಿದೆ.

ಜೈಲು ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಅಫ್ತಾಬ್‌ನ ಸೆಲ್‌ನಲ್ಲಿ ಕಳ್ಳತನ ಮತ್ತು ಸರಗಳ್ಳತನದಂತಹ ಪ್ರಕರಣಗಳನ್ನು ಹೊಂದಿರುವ ಇನ್ನಿಬ್ಬರು ಕೈದಿಗಳಿದ್ದಾರೆ. ಅಫ್ತಾಬ್ ಇರುವ ವಾರ್ಡ್ ಸಂಖ್ಯೆ 15ರಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಕೈದಿಗಳನ್ನು ಇರಿಸಲಾಗಿದ್ದರೂ, ಅಫ್ತಾಬ್ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಅಫ್ತಾಬ್ ಮೇಲೆ ಇತರ ಕೈದಿಗಳು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಆತನ ವಾರ್ಡ್‌ನಿಂದ ಹೊರಗೆ ಬರದಂತೆ ಜೈಲು ಆಡಳಿತ ಸ್ಪಷ್ಟವಾಗಿ ಸೂಚನೆ ನೀಡಿದೆ.

ವೈದ್ಯಕೀಯ ಪರೀಕ್ಷೆ ನಡೆದು ಜೈಲಿನ ವೈದ್ಯರು:ಅಫ್ತಾಬ್‌ನ ಜೈಲು ತಲುಪಿದಾಗ ಜೈಲು ವೈದ್ಯರ ತಂಡವು ಆರೋಗ್ಯ ತಪಾಸಣೆ ನಡೆಸಿತು. ಆದರೆ ಪಾಲಿಗ್ರಾಫ್ ಪರೀಕ್ಷೆಯ ಸಮಯದಲ್ಲಿ ಅಫ್ತಾಬ್​​ ಆರೋಗ್ಯ ಹದಗೆಟ್ಟಿತ್ತು. ಆದರೆ, ತಿಹಾರ್ ಜೈಲಿಗೆ ಬಂದ ನಂತರ ಆರೋಪಿಗೆ ಜ್ವರವೇನೂ ಬಂದಿರಲಿಲ್ಲ. ಆದರೂ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ವಿಶೇಷ ನಿಗಾ ಇರಿಸಿದೆ.

ಇನ್ನು ಅಫ್ತಾಬ್ ಸೆಲ್ ಮೇಲೆ ಕಣ್ಣಿಡಲು ಒಟ್ಟು 13 ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ಇಂದು ಅಫ್ತಾಬ್​​ನನ್ನು ಮತ್ತೊಮ್ಮೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ರೋಹಿಣಿಯಲ್ಲಿ ಪಾಲಿಗ್ರಾಫ್ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಮಾಹಿತಿ ಪ್ರಕಾರ, ಜೈಲಿನಲ್ಲಿದ್ದಾಗ ಭೇಟಿಯಾದ ವ್ಯಕ್ತಿಗಳ ಪಟ್ಟಿಯಲ್ಲಿ ಅವರ ಪೋಷಕರು, ಸಹೋದರ ಮತ್ತು ಸ್ನೇಹಿತರ ಹೆಸರನ್ನು ಜೈಲು ರಿಜಿಸ್ಟರ್‌ನಲ್ಲಿ ಬರೆಯಲಾಗಿದೆ. ಅವರ ಮನೆಯ ವಿಳಾಸವನ್ನು ಮೇನ್ ವಸೈ, ಪಶ್ಚಿಮ ಪಾಲ್ಘರ್, ಮಹಾರಾಷ್ಟ್ರ ಎಂದು ದಾಖಲಿಸಲಾಗಿದೆ.

ಇದನ್ನು ಓದಿ:ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಪಾಟ್ನಾದ ರೈಲ್ವೆ ನಿಲ್ದಾಣದಲ್ಲಿ ಯುವಕನ ಮೇಲೆ ಗುಂಡಿನ ದಾಳಿ

ABOUT THE AUTHOR

...view details