ಕಾರವಾರ:ಆಟೋ ರಿಕ್ಷಾದಲ್ಲಿ ಕರೆದೊಯ್ದು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದೆ ಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕೋನಳ್ಳಿಯ ನಿವಾಸಿ ಅಖಿಲ್ ಈಶ್ವರ ಅಡಿಗುಂಡಿ (20) ಹಾಗೂ ಹೊನ್ನಾವರ ಕಡತೋಕಾದ ಹೆಬ್ಳೆಕೊಪ್ಪ ನಿವಾಸಿ ಸಮರ್ಥ ಜಟ್ಟಿ ಮುಕ್ರಿ (20) ಬಂಧಿತರು. ದೌರ್ಜನ್ಯ ನಡೆದ ವಿಷಯ ತಿಳಿದ ಕೂಡಲೇ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣ ಸಂಬಂಧ ಬಾಲಕಿಯ ಹೇಳಿಕೆಯ ಆಧಾರದಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕುಮಟಾ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಇಬ್ಬರ ಬಂಧನ - ಕುಮಟಾದಲ್ಲಿ ಇಬ್ಬರು ಆರೋಪಿಗಳ ಬಂಧನ
ಈ ಪ್ರಕರಣದಲ್ಲಿ ತಾಲೂಕಿನ ಕೋನಳ್ಳಿಯ ನಿವಾಸಿ ಅಖಿಲ್ ಈಶ್ವರ ಅಡಿಗುಂಡಿ ಹಾಗೂ ಹೊನ್ನಾವರ ಕಡತೋಕಾದ ಹೆಬ್ಳೆಕೊಪ್ಪ ನಿವಾಸಿ ಸಮರ್ಥ ಜಟ್ಟಿ ಮುಕ್ರಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Sexual assault on minor in kumata police arrest Two accused