ಮುಂಬೈ: ಐಶಾರಾಮಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು 32 ವರ್ಷದ ರೂಪದರ್ಶಿಯನ್ನು ಬಂಧಿಸಿದ್ದಾರೆ. ಜುಹು ಪ್ರದೇಶದ ಹೋಟೆಲ್‌ವೊಂದರಲ್ಲಿ ಕಿರುತೆರೆ ನಟಿ ಹಾಗೂ ಮಾಡೆಲ್ ಇಬ್ಬರು ಸೇರಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ದಂಧೆಗೆ ದೂಡಿದ್ದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಹೈಪ್ರೊಫೈಲ್ ಸೆಕ್ಸ್ ದಂಧೆ ಬಯಲು: ಮುಂಬೈನಲ್ಲಿ ನಟಿ, ಮಾಡೆಲ್ ಬಂಧನ - ಮುಂಬೈ ಕ್ರೈಮ್ ನ್ಯೂಸ್
ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ 32 ವರ್ಷದ ರೂಪದರ್ಶಿ ಹಾಗೂ ಕಿರುತೆರೆ ನಟಿಯನ್ನು ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಐಷಾರಾಮಿ ಹೋಟೆಲ್‌ನಲ್ಲಿ ವೈಶ್ಯವಾಟಿಕೆ ದಂಧೆ ಆರೋಪ; ಮುಂಬೈ ಪೊಲೀಸರಿಂದ ರೂಪದರ್ಶಿ, ಕಿರುತೆರೆ ನಟಿ ಬಂಧನ
ಕಳೆದ ಬುಧವಾರ ಸಂಜೆ ಈ ದಾಳಿ ನಡೆದಿದ್ದು, ಟಿವಿ ನಟಿ ಹಾಗೂ ರೂಪದರ್ಶಿ ಖಾಸಗಿ ಚಾನೆಲ್‌ವೊಂದರ ಸೋಪು ಜಾಹೀರಾತಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯನ್ನು ದಂಧೆಗೆ ದೂಡಿದ್ದರು. ಈ ಇಬ್ಬರಿಗೂ 4 ಲಕ್ಷ ರೂಪಾಯಿ ನಿಗದಿ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅನೈತಿಕ ಚಟುವಟಿಕೆಗಳ(ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
Last Updated : Aug 21, 2021, 2:49 PM IST