ಮಾಸ್ಕೋ (ರಷ್ಯಾ):ಇಲ್ಲಿನ ಪರ್ಮ್ ರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ಅಪರಿಚಿತ ಬಂದೂಕುಧಾರಿಯೋರ್ವ ಮನಸೋಯಿಯಿಚ್ಛೆ ನಡೆಸಿದ ಗುಂಡಿನ ದಾಳಿಗೆ 8 ಮಂದಿ ಬಲಿಯಾಗಿದ್ದಾರೆ ಎಂದು ರಷ್ಯಾದ ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಪರ್ಮ್ ಪ್ರಾದೇಶಿಕ ಆರೋಗ್ಯ ಸಚಿವಾಲಯ ಸಹ ಈ ಕುರಿತು ಮಾಹಿತಿ ನೀಡಿದ್ದು, ಘಟನೆಯಲ್ಲಿ 14 ಜನರು ಗಾಯಗೊಂಡಿದ್ದು, ಗಾಯಾಳುಗಳ ನಿಖರ ಸಂಖ್ಯೆ ಬಗ್ಗೆ ತಿಳಿದುಬಂದಿಲ್ಲ ಎಂದಿದೆ. ವಿವಿಯ ಬಹುತೇಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತರಗತಿಗಳ ಬಾಗಿಲು ಹಾಕಿಕೊಂಡು ಒಳಗೆ ಸ್ವಯಂ ಬಂಧಿಯಾಗಿದ್ದಾರೆ. ಆಗಂತುಕನು, ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದಾನೆ. ಯಾರು ಕೂಡ ಕ್ಯಾಂಪಸ್ನಲ್ಲಿ ತಿರುಗಾಡದಂತೆ ವಿವಿ ಮನವಿ ಮಾಡಿದೆ.