ಹುಬ್ಬಳ್ಳಿ : ಫೇಸ್‌ಬುಕ್ ಖಾತೆಯನ್ನು ಅನ್ ಬ್ಲಾಕ್ ಮಾಡಿಕೊಡುವುದಾಗಿ ನಂಬಿಸಿ ಯುವತಿಗೆ 5.65 ಲಕ್ಷ ರೂಪಾಯಿ ವಂಚಿಸಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಪ್ರೀತಿ ಎಂಬ ಯುವತಿ ವಂಚನೆಗೆ ಒಳಗಾದವರು.
ಬ್ಲಾಕ್ ಆಗಿರುವ ಫೇಸ್‌ಬುಕ್ ಖಾತೆಯನ್ನು ಅನ್ ಬ್ಲಾಕ್ ಮಾಡಿಸುವ ಸಲುವಾಗಿ ಗೂಗಲ್‌ನಲ್ಲಿ ಫೇಸ್ ಬುಕ್ ಕಸ್ಟಮರ್ ಕೇರ್ ನಂಬರನ್ನು ಪ್ರೀತಿ ಸಂಪರ್ಕಿಸಿದ್ದಾರೆ. ಅಪರಿಚಿತರು ಸಹಾಯ ಮಾಡುವ ನೆಪದಲ್ಲಿ ಮೊಬೈಲ್‌ಗೆ ಎಡೆಸ್ ಆ್ಯಪ್ ಡೌನ್ ಲೋಡ್ ಮಾಡಿಸಿ ಅದರ ಸಹಾಯದಿಂದ ಹಂತ ಹಂತವಾಗಿ ಒಟ್ಟು 5.65 ಲಕ್ಷ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.