ಕರ್ನಾಟಕ

karnataka

ETV Bharat / crime

ಅಪ್ಪನ ಕೊಂದವನನ್ನು ಹಾಡಹಗಲೇ ನಡುರಸ್ತೆಯಲ್ಲೇ ಹತೈ ಮಾಡಿದ ಮಕ್ಕಳು - ಭೀಕರ ವಿಡಿಯೋ

ಅಪ್ಪನ ಕೊಂದ ಆರೋಪಿ ಜೈಲಿನಿಂದ ಹೊರ ಬರುವುದನ್ನೇ ಕಾದು ಕುಳಿತಿದ್ದ ಮಕ್ಕಳು ಕೊನೆಗೂ ಆತನನ್ನು ಹತೈ ಮಾಡಿ ಪ್ರತಿಕಾರ ತೀರಿಸಿಕೊಂಡಿದ್ದಾರೆ.

Hyderabad murder news
ಅಪ್ಪನನ್ನ ಕೊಂದವನ ಹಾಡಹಗಲೇ ನಡುರಸ್ತೆಯಲ್ಲಿ ಹತೈಗೈದ ಮಕ್ಕಳು

By

Published : Apr 2, 2021, 10:14 AM IST

Updated : Apr 2, 2021, 10:20 AM IST

ಹೈದರಾಬಾದ್​ (ತೆಲಂಗಾಣ): ಮೂರು ವರ್ಷಗಳ ಹಿಂದೆ ತಂದೆಯನ್ನು ಕೊಂದಿದ್ದ ವ್ಯಕ್ತಿಯನ್ನ ನಡುರಸ್ತೆಯಲ್ಲಿ ಹಾಡಹಗಲೇ ಮಕ್ಕಳು ಕೊಚ್ಚಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನ ರಾಜೇಂದ್ರನಗರದಲ್ಲಿ ನಿನ್ನೆ ನಡೆದಿದೆ.

ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಮುಖಂಡ ಆಜಾದ್​ ಖಾನ್​ (47) ಕೊಲೆಯಾದ ವ್ಯಕ್ತಿ.

ನಡುರಸ್ತೆಯಲ್ಲೇ ಕೊಲೆ

ಪ್ರತಿಕಾರದ ಕಿಚ್ಚು - ಘಟನೆ ಹಿನ್ನೆಲೆ:ಆಜಾದ್​ ಖಾನ್ ಹಾಗೂ ಅಮ್ಜಾದ್ ಖಾನ್ ಇಬ್ಬರು ಸ್ನೇಹಿತರು. ಅವರ ಸ್ನೇಹವನ್ನು ಇನ್ನಷ್ಟು ಬಲಪಡಿಸಲು ಬಯಸಿದ ಅಜಾದ್, ನಾಲ್ಕು ವರ್ಷಗಳ ಹಿಂದೆ ತನ್ನ ಮಗಳನ್ನು ಅಮ್ಜಾದ್ ಮಗನಿಗೆ ಕೊಟ್ಟು ಮದುವೆ ಮಾಡಿದ್ದರು. ಆದರೆ, ವಿವಾಹವಾದ ಕೆಲ ದಿನಗಳಲ್ಲೇ ಜಗಳ ಮಾಡಿಕೊಂಡು ದಂಪತಿ ದೂರವಾದರು. ಇದಕ್ಕೆಲ್ಲ ನೀನೇ ಕಾರಣ ಎಂದು ಅಮ್ಜಾದ್​ನನ್ನು ಆಜಾದ್ ದೂರಿದ್ದ.

2018ರಲ್ಲಿ ಗುಂಪು ಕಟ್ಟಿಕೊಂಡು ಬಂದ ಆಜಾದ್​ ಖಾನ್, ವೆಲ್ಡಿಂಗ್ ಶಾಪ್​ನಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಅಮ್ಜಾದ್​ನನ್ನು ಮಾರಕಾಸ್ತ್ರಳಿಂದ ಕೊಚ್ಚಿ ಕೊಲೆ ಮಾಡಿದ್ದನು. ಜೈಲುಪಾಲಾಗಿದ್ದ ಆಜಾದ್ ಖಾನ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಹೊರ ಬಂದಿದ್ದನು. ಆತ ಹೊರಬರುವುದನ್ನೇ ಕಾದು ಕುಳಿತಿದ್ದ ಅಮ್ಜಾದ್ ಖಾನ್​ನ ಪುತ್ರರು ನಿನ್ನೆ ನಡುರಸ್ತೆಯಲ್ಲೇ ಆಜಾದ್​ನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಶಮ್​ಶಾಬಾದ್​ ಡಿಸಿಪಿ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ.

Last Updated : Apr 2, 2021, 10:20 AM IST

ABOUT THE AUTHOR

...view details