ಬಳ್ಳಾರಿ: ರೆಮ್ಡಿಸಿವರ್ ಬ್ಲ್ಯಾಕ್ಮಾರ್ಕೆಟ್ನಲ್ಲಿ ಮಾರಾಟ ಮಾಡುತ್ತಿರುವ ಜಾಲಪತ್ತೆ ಹಿನ್ನೆಲೆಯಲ್ಲಿ, ಮತ್ತೆ ಮೂವರನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಓದಿ: ನೀವು ಬಿಜೆಪಿ ಸಂಸದರಾಗುವುದಕ್ಕೂ ಮೊದಲು ಕನ್ನಡಿಗ: ತೇಜಸ್ವಿ ಸೂರ್ಯಗೆ ಹೆಚ್ಡಿಕೆ ಟ್ವೀಟ್ ಬಾಣ

ಮಹಾಮಾರಿ ಕೊರೊನಾ ಸೋಂಕಿನ ವೇಗ ನಿಯಂತ್ರಣ ಮಾಡೋದರ ಸಲುವಾಗಿಯೇ ರೆಮ್ಡಿಸಿವರ್ ಇಂಜೆಕ್ಷನ್ ಬಳಕೆ ಮಾಡಲಾಗುತ್ತದೆ. ಕೇವಲ 3000 ರೂ.ಗಳಿಗೆ ಮಾತ್ರ ಲಭ್ಯವಾಗುವ ರೆಮ್ಡಿಸಿವರ್ ಇಂಜೆಕ್ಷನ್ ಅನ್ನು 30,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಜಾಲವೊಂದರಲ್ಲಿ ಈಗಾಗಲೇ ಬಳ್ಳಾರಿಯ ರಾಘವೇಂದ್ರ ಕಾಲೊನಿಯ ಕಿಶೋರ ಕುಮಾರ ಎಂಬಾತನನ್ನ ಬಂಧಿಸಲಾಗಿತ್ತು.
ಅದರ ಬೆನ್ನಲ್ಲೇ ಮತ್ತೆ ಮೂವರನ್ನ ಬಂಧಿಸಿ ಈ ಜಾಲದ ಜಾಡು ಬೇಧಿಸಲು ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಉದ್ಯಮಿ ಪೋಲಾ ಪ್ರವೀಣ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಮಂಜುನಾಥ ಮೆಡಿಕಲ್ ಏಜೆನ್ಸಿಯ ಮಾಲೀಕನಾದ ವೆಂಕಟೇಶಬಾಬು ಎಂಬುವರನ್ನು ಈಗ ಬಂಧಿಸಲಾಗಿದೆ.