ಗಾಜಿಯಾಬಾದ್:ಹೆಂಡತಿಯನ್ನು ಕೊಲೆ ಮಾಡಿದ ಪ್ರಕರಣ ಸಂಬಂಧ ಗಂಡನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಇನ್ನು ಯಾವ ಉದ್ದೇಶಕ್ಕಾಗಿ ಈ ಕೊಲೆ ಮಾಡಲಾಯಿತು ಎಂಬ ವಿಚಾರಣೆ ವೇಳೆ ಆತ ಬಾಯ್ಬಿಟ್ಟ ಕಾರಣ ಮಾತ್ರ ಪೊಲೀಸರಿಗೆ ಶಾಕ್ ಮೂಡಿಸಿದೆ. ಹೆಂಡತಿ ಈಗಾಗಲೇ ಎರಡು ಮದುವೆಯನ್ನು ಆಗಿದ್ದಳು. ಎರಡನೇ ಗಂಡ ಬೇರೆ ಸಮುದಾಯದಕ್ಕೆ ಸೇರಿದ್ದರೆ, ಮೊದಲ ಗಂಡ ಹಿಂದೂವಾಗಿದ್ದ. 16 ವರ್ಷದ ಮಗನ ಜೊತೆಗೆ ಮೂರನೇ ಮದುವೆಯನ್ನು ಆರೋಪಿಯೊಂದಿಗೆ ಆಗಿದ್ದಳು ಎಂದಿದ್ದಾನೆ.
ಎರಡನೇ ಗಂಡನ ಸಲುವಾಗಿ ಈತ ಈ ಕೊಲೆಯನ್ನು ಮಾಡಿದ್ದು, ವಿಡಿಯೋ ಕಾಲ್ ಬಳಿಕ ಈ ಕೃತ್ಯ ನಡೆದಿರುವುದಾಗಿ ಆತ ತಿಳಿಸಿದ್ದಾನೆ
ವಿವಿಧ ಹೆಸರಿನಲ್ಲಿ ಸಂಬಂಧ: ಡಿ. 26ರಂದು ಗಾಜಿಯಾಬಾದ್ನ ಕಾಶ್ಕ್ಷಿರಾಮ್ ಕಾಲೋನಿ ಯಲ್ಲಿ ಭವ್ಯ ಶರ್ಮಾ ಎಂಬ ಮಹಿಳೆ ಕೊಲೆ ಯಾಗಿರುವ ಸಂಬಂಧ ವಿಜಯನಗರ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಗಂಡ ವಿನೋದ್ ಶರ್ಮಾನನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಸಿದಾಗ ಭವ್ಯ ಈಗಾಗಲೇ ಮೂರು ಮದುವೆಯನ್ನು ಅಗಿದ್ದಳು. ಯೋಗೇಂದ್ರ ಯಾದವ್ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾಗಿದ್ದ ಭವ್ಯ ಈ ಸಂಬಂಧ ಮುರಿದುಕೊಂಡು ಅನೀಸ್ ಅನ್ಸಾರಿ ಜೊತೆ ಆಸಿಫಾ ಎಂಬ ಹೆಸರಿನಲ್ಲಿ ಎರಡನೇ ಮದುವೆಯಾಗಿದ್ದಳು. ಐದು ತಿಂಗಳ ಹಿಂದೆ ಈ ಸಂಬಂಧವು ಕಡಿದುಕೊಂಡ ಆಕೆ ವಿನೋದ್ ಶರ್ಮಾನನ್ನು ಭವ್ಯ ಎಂಬ ಹೆಸರಿನ ಮೂಲಕ ಮದುವೆಯಾಗಿದ್ದಳು.