ಚಿಕ್ಕಮಗಳೂರು: ನಿನ್ನ ತಂದೆಗೆ ಹುಷಾರಿಲ್ಲ ಎಂದು ನಂಬಿಸಿ, ಬೈಕ್ನಲ್ಲಿ ಕರೆದೊಯ್ದು ಅಪ್ರಾಪ್ತೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ನಿನ್ನ ತಂದೆಗೆ ಹುಷಾರಿಲ್ಲ ಎಂದು ಕರೆದೊಯ್ದು ಅಪ್ರಾಪ್ತೆಯ ಮೇಲೆ ಅತ್ಯಾಚಾರ - ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು
ತಂದೆಗೆ ಹುಷಾರಿಲ್ಲ ಎಂದು ಅಪ್ರಾಪ್ತೆಯನ್ನು ನಂಬಿಸಿ, ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಬಾಳೆಹೊನ್ನೂರು ಪೊಲೀಸ್ ಠಾಣೆ
ಗಿರೀಶ್, ಅತ್ಯಾಚಾರ ಎಸಗಿದ ದುಷ್ಕರ್ಮಿಯಾಗಿದ್ದು, ಸುಳ್ಳು ಹೇಳಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಬಾಲಕಿಯ ತಂದೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಲಕಿಯ ತಂದೆಯ ಮೇಲಿನ ದ್ವೇಷದಿಂದ ಅತ್ಯಾಚಾರ ಮಾಡಿರುವುದಾಗಿ ಸ್ವತಃ ಬಾಲಕಿಯ ಬಳಿಯೇ ಗಿರೀಶ್ ಹೇಳಿದ್ದಾಗಿ ದೂರಿನಲ್ಲಿ ದಾಖಲಾಗಿದೆ. ಆರೋಪಿ ಗಿರೀಶ್ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.