ಕರ್ನಾಟಕ

karnataka

ETV Bharat / crime

ಮಂಗಳೂರ: ಅತ್ಯಾಚಾರ ಆರೋಪ ಸಾಬೀತು; ಅಪರಾಧಿಗೆ ಕಠಿಣ ಶಿಕ್ಷೆ, 85 ಸಾವಿರ ರೂ. ದಂಡ - ಮಂಗಳೂರಿನಲ್ಲಿ ಅಪರಾಧಿಗೆ ಕಠಿಣ ಶಿಕ್ಷೆ, 85 ಸಾವಿರ ರೂ. ದಂಡ

ಪರಿಚಿತ ಬಾಲಕಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಅಪಹರಿಸಿ ಅತ್ಯಾಚಾರದ ಆರೋಪ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಅಪರಾಧಿ ಬಾಲಕೃಷ್ಣ ಎಂಬುವವನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎಫ್‌ಟಿಎಸ್‌ಸಿ-1(ಪೊಕ್ಸೊ) ಕೋರ್ಟ್‌ 7 ವರ್ಷ ಕಠಿಣ ಶಿಕ್ಷೆ, 85 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

Rape charges proved; Guilty was sentenced to imprisonment in Mangalore
ಮಂಗಳೂರ: ಅತ್ಯಾಚಾರ ಆರೋಪ ಸಾಬೀತು; ಅಪರಾಧಿಗೆ ಕಠಿಣ ಶಿಕ್ಷೆ, 85 ಸಾವಿರ ರೂ. ದಂಡ

By

Published : Sep 28, 2021, 3:41 AM IST

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ‌ ಆರೋಪಿ ವಿಟ್ಲ ಕಸ್ಬಾ ಉಕ್ಕುಡದ ಬಾಲಕೃಷ್ಣ (25) ಎಂಬ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎಫ್‌ಟಿಎಸ್‌ಸಿ-1(ಪೊಕ್ಸೊ) ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಲ್ಲದೆ 75 ಸಾವಿರ ರೂ. ದಂಡ ಮತ್ತು ಅಪಹರಣ ಪ್ರಕರಣಕ್ಕೆ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 50 ಸಾವಿರ ರೂ. ಹಣನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ಅಪರಾಧಿ ಬಾಲಕೃಷ್ಣ 85 ಸಾವಿರ ರೂ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಕಠಿಣ ಶಿಕ್ಷೆ ಅನುಭವಿಸಬೇಕು.‌ ಜತೆಗೆ ಸಂತ್ರಸ್ತ ಬಾಲಕಿಗೆ ಸರ್ಕಾರ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಆದೇಶಿಸಿದ್ದಾರೆ.

2019ರ ಜು.25ರಂದು ಅಪರಾಧಿ ಬಾಲಕೃಷ್ಣ ತನ್ನದೇ ಊರಿನ ಪರಿಚಿತ ಬಾಲಕಿಯನ್ನು ಶಾಲೆಗೆ ಹೋಗುವ ಸಂದರ್ಭದಲ್ಲಿ ಪರಶುರಾಮ ಎಂಬಾತನ ಸಹಕಾರದಿಂದ ಅಪಹರಿಸಿದ್ದನು. ಬಿ.ಸಿ.ರೋಡ್‌ವರೆಗೆ ಬೈಕ್‌ನಲ್ಲಿ ಕರೆದೊಯ್ದಿದ್ದು, ಬಳಿಕ ಬಸ್‌ನಲ್ಲಿ ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ. ಬಳಿಕ ಬೆಂಗಳೂರಿಗೆ ಕರೆದೊಯ್ದಿದ್ದ ಎಂದು ಆರೋಪಿಸಲಾಗಿತ್ತು.

ABOUT THE AUTHOR

...view details