ಧಾರವಾಡ: ತಿನಿಸಿನ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣೀಗೆರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಬಂಧಿತ ಆರೋಪಿಯಾಗಿದ್ದಾನೆ. ನಗರದಲ್ಲಿ ಭಿಕ್ಷೆ ಬೆಡುತಿದ್ದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆರೋಪಿ ಪರಾರಿಯಾಗಿದ್ದ.
ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿ ಖೆಡ್ಡಾಗೆ ಕೆಡವಿದ ಧಾರವಾಡ ಪೊಲೀಸ್
ಭಿಕ್ಷೆ ಮಾಡುತ್ತಿದ್ದ ಅಪ್ರಾಪ್ತೆಗೆ ತಿನಿಸಿನ ಆಸೆ ತೋರಿಸಿ ಅತ್ಯಾಚಾರದ ಕೃತ್ಯ ವೆಸಗಿದ್ದ ಆರೋಪಿ ಧಾರವಾಡ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಣ್ಣೀಗೆರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಬಂಧಿತ ಆರೋಪಿಯಾಗಿದ್ದಾನೆ.
ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ: ಧಾರವಾಡ ಪೊಲೀಸರಿಂದ ಆರೋಪಿ ಬಂಧನ
ಬಾಲಕಿಗೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತಂದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಂಧಿತ ಆರೋಪಿ ಎಗ್ ರೈಸ್ ಹಾಗೂ ಗೋಬಿ ಕೊಡಿಸುವ ಆಸೆ ತೋರಿಸಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಬಾಲಕಿಗೆ ಕೌನ್ಸೆಲಿಂಗ್ ಮಾಡಿ ಮಕ್ಕಳ ರಕ್ಷಣಾ ಘಟಕ, ಉಪನಗರ ಠಾಣೆಯಲ್ಲಿ ದೂರು ದಾಖಲಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಅತ್ಯಾಚಾರ ನಡೆಸಿದವರ ಹುಟುಕಾಟ ನಡೆಸಿದ್ದರು. ಇದೀಗ ಉಪನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.