ಮುಜಾಫರ್ಪುರ್(ಬಿಹಾರ):ಪುತ್ರಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತಂದೆಯೋರ್ವ ಕೋರ್ಟ್ ಆದೇಶಕ್ಕೂ ಮುನ್ನವೇಆರೋಪಿಗೆ ಶಿಕ್ಷೆ ವಿಧಿಸಿದ್ದಾನೆ. ತನ್ನ ಮಗಳ ಜೀವನ ಹಾಳು ಮಾಡಿದವನ ಮೇಲೆ ತಂದೆ ಸೇಡು ತೀರಿಸಿಕೊಂಡಿರುವ ಘಟನೆ ಮುಜಾಫರ್ಪುರ್ದಲ್ಲಿ ನಡೆದಿದೆ. ಆರೋಪಿಯನ್ನು ಕೋರ್ಟ್ ಆವರಣದಲ್ಲೇ ಮಾಜಿ ಯೋಧ ಶೂಟ್ ಮಾಡಿ ಕೊಂದಿದ್ದಾನೆ.
ಮೃತ ಆರೋಪಿಯನ್ನು ದಿಲ್ಶಾದ್ ಹುಸೇನ್ ಎಂದು ಗುರುತಿಸಲಾಗಿದೆ. ಪ್ರಕರಣವೊಂದರ ವಿಚಾರಣೆಗೆ ಹಾಜರಾಗಲು ಆರೋಪಿ ಕೋರ್ಟ್ ಆವರಣದ ಗೇಟ್ ಬಳಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲೇ ಇದ್ದ ಬಿಎಸ್ಎಫ್ನ ಮಾಜಿ ಯೋಧನಾಗಿರುವಸಂತ್ರಸ್ತೆಯ ತಂದೆಯು ಆರೋಪಿ ದಿಲ್ಶಾದ್ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆರೋಪಿಯನ್ನು ಕೋರ್ಟ್ಗೆ ಕರೆದಿದ್ದ ಪೊಲೀಸರು ಕೂಡಲೇ ಸಂತ್ರಸ್ತೆಯತಂದೆಯನ್ನು ಬಂಧಿಸಿದ್ದಾರೆ.