ಕರ್ನಾಟಕ

karnataka

ETV Bharat / crime

ಕೆಂಪು ಕೋಟೆ ಹಿಂಸಾಚಾರ: ನಟ ದೀಪ್​ ಸಿಧು ಪೊಲೀಸ್​ ಕಸ್ಟಡಿ ಅವಧಿ ವಿಸ್ತರಣೆ - ಕೆಂಪು ಕೋಟೆ ಹಿಂಸಾಚಾರ

ಪಂಜಾಬ್​ ನಟ ದೀಪ್ ಸಿಧು ಅವರ ಪೊಲೀಸ್​ ಕಸ್ಟಡಿ ಅವಧಿ ಮತ್ತೆ ಒಂದು ವಾರಕ್ಕೆ ವಿಸ್ತರಣೆ ಮಾಡಲಾಗಿದೆ.

Deep Sidhu's police custody extended by 7 days
ನಟ ದೀಪ್​ ಸಿಧು ಪೊಲೀಸ್​ ಕಸ್ಟಡಿ ಅವಧಿ ವಿಸ್ತರಣೆ

By

Published : Feb 16, 2021, 2:41 PM IST

ನವದೆಹಲಿ: ಗಣರಾಜ್ಯೋತ್ಸವ ದಿನದಂದು ನಡೆದ ಕೆಂಪು ಕೋಟೆ ಹಿಂಸಾಚಾರ ಪ್ರಕರಣ ಸಂಬಂಧ ಪಂಜಾಬ್​ ನಟ ದೀಪ್ ಸಿಧು ಅವರ ಪೊಲೀಸ್​ ಕಸ್ಟಡಿಯನ್ನು ಮತ್ತೆ ಏಳು ದಿನಗಳ ಅವಧಿಗೆ ವಿಸ್ತರಿಸಲಾಗಿದೆ.

ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಮುಖ ಆರೋಪಿ ಎಂದು ದೀಪ್ ಸಿಧು ಅವರನ್ನು ಫೆ.9 ರಂದು ಹರಿಯಾಣದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಇವರನ್ನು 7 ದಿನಗಳ ಕಾಲ ನ್ಯಾಯಾಲಯವು ಪೊಲೀಸ್​ ಕಸ್ಟಡಿಗೆ ನೀಡಿತ್ತು. ಇದೀಗ ಮತ್ತೆ ಒಂದು ವಾರಕ್ಕೆ ಅವಧಿ ವಿಸ್ತರಣೆಯಾಗಿದೆ.

ಇದನ್ನೂ ಓದಿ: ಪ್ಯಾಂಗಾಂಗ್​ ಸರೋವರದಿಂದ ಭಾರತ ಚೀನಾ ಪಡೆಗಳು ವಾಪಸ್​.. ಮತ್ತಷ್ಟು ವಿಡಿಯೋ

ಜ.26ರಂದು ನಡೆದಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾತ್ಮಕ ರೂಪ ಪಡೆದಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾನಿರತ ರೈತರು, ಕೋಟೆ ಮೇಲೆ ಧ್ವಜ ಹಾರಿಸಿದ್ದರು. ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಈ ಹಿಂಸಾಚಾರದಲ್ಲಿ ಸುಮಾರು 394 ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದರು.

ಕೆಂಪು ಕೋಟೆ ಮೇಲೆ ಧ್ವಜ ಹಾರಿಸಲು ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಅರೆಸ್ಟ್ ಆಗಿದ್ದ ದೀಪ್ ಸಿಧು ಮತ್ತು ಇಕ್ಬಾಲ್ ಸಿಂಗ್​ರನ್ನು ಕೃತ್ಯದ ದೃಶ್ಯವನ್ನು ಮರುಸೃಷ್ಟಿಸಲು ಫೆ.13ರಂದು ಕೆಂಪು ಕೋಟೆಗೆ ಪೊಲೀಸರು ಕರೆದೊಯ್ದಿದ್ದರು.

ABOUT THE AUTHOR

...view details