ಕರ್ನಾಟಕ

karnataka

ETV Bharat / crime

ಪತ್ನಿ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನಿಸಿದ ಸ್ನೇಹಿತನ ಕೊಲೆ: ಆರೋಪಿ ಅಂದರ್ - ಬನ್ನೂರು ಪೊಲೀಸ್ ಠಾಣೆಯ ಪಿಎಸ್​​ಐ ಪುನೀತ್

ಪತ್ನಿ ಜೊತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಸ್ನೇಹಿತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

wife friend murder in mysuru
ಆರೋಪಿ ಅಂದರ್

By

Published : Jun 1, 2021, 3:17 PM IST

ಮೈಸೂರು:ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು, ಪ್ರಶ್ನಿಸಿದ ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಓದಿ: ಪವರ್ ಬೆಗ್ಗರ್ಸ್ ಬಗ್ಗೆ ನಾನು ಮಾತನಾಡಲ್ಲ: ಬಿಜೆಪಿ ನಾಯಕರಿಗೆ ಡಿಕೆಶಿ ಟಾಂಗ್

ಬನ್ನೂರಿನ ಸೋಸಲೆ ಗ್ರಾಮದ ಮಹೇಶ್ ಬಂಧಿತ ಕೊಲೆ ಆರೋಪಿ. ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದ ಆಂಜನೇಯ (30 )ನ ಪತ್ನಿಯೊಂದಿಗೆ ಮಹೇಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಸ್ನೇಹಿತರಾಗಿದ್ದು, ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಈ ವಿಚಾರವಾಗಿ ವಾರಗಳ ಹಿಂದೆ ಬನ್ನೂರಿನ ಸೋಸಲೆ ಬಸ್​​​ ನಿಲ್ದಾಣದ ಬಳಿ ಮತ್ತೆ ಇಬ್ಬರ ನಡುವೆ ಗಲಾಟೆ ಶುರುವಾಗಿ ಆಂಜನೇಯನನ್ನು ಕೊಲೆ ಮಾಡಿ ಮಹೇಶ್ ಪರಾರಿಯಾಗಿದ್ದಾನೆ.

ಬನ್ನೂರು ಪೊಲೀಸ್ ಠಾಣೆಯ ಪಿಎಸ್​​ಐ ಪುನೀತ್ ಮತ್ತು ವೃತ್ತ ನಿರೀಕ್ಷಕ ಕೃಷ್ಣಪ್ಪ ಸ್ಥಳ ಮಹಜರು ಮಾಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾದ ಬಳಿಕ ವೃತ್ತ ನಿರೀಕ್ಷಕ ಕೃಷ್ಣಪ್ಪ ನೇತೃತ್ವದಲ್ಲಿ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿತ್ತು. ಕೊನೆಗೂ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

ABOUT THE AUTHOR

...view details