ಮುಂಬೈ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಪರಿಣಾಮ ಪೀಠೋಪಕರಣಗಳ ಗೋದಾಮು ಹೊತ್ತಿ ಉರಿದ ಘಟನೆ ಪುಣೆಯ ಯೆವ್ಲೆವಾಡಿಯಲ್ಲಿ ನಡೆದಿದ್ದು, ಐವರು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಗ್ಗೆ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಬಂದ 8 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
ಪೀಠೋಪಕರಣಗಳ ಗೋದಾಮಿಗೆ ಬೆಂಕಿ; ಐವರು ಪ್ರಾಣಾಪಾಯದಿಂದ ಪಾರು - Fire in Furniture Godown at yeolawadi pune and narrow escape for five workers
ಪುಣೆಯ ಯೆವ್ಲೆವಾಡಿಯಲ್ಲಿ ಪೀಠೋಪಕರಣಗಳ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ಸುಟ್ಟು ಕರಕಲಾಗಿವೆ. ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪುಣೆ: ಪೀಠೋಪಕರಣಗಳ ಗೋದಾಮಿಗೆ ಬೆಂಕಿ; ಐವರು ಪ್ರಾಣಾಪಾಯದಿಂದ ಪಾರು
ಪೀಠೋಪಕರಣಗಳ ಗೋದಾಮಿಗೆ ಬೆಂಕಿ; ಐವರು ಪ್ರಾಣಾಪಾಯದಿಂದ ಪಾರು
ಬೆಂಕಿ ಅವಘಡದಿಂದ ಸುಮಾರು 15 ಲಕ್ಷ ರೂಪಾಯಿ ನಷ್ಟವಾಗಿದೆ. ಈ ಗೋಡೌನ್ ಎಜಾಜ್ ಸಿದ್ದಿಕಿ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಬಾಡಿಗೆಗೆ ಗೋಡೌನ್ ಪಡೆದು ಪೀಠೋಪಕರಣಗಳನ್ನು ತುಂಬಿಸಿದ್ದರು. ಬೆಂಕಿ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಸಮೀರ್ ಶೇಖ್ ಮಾಹಿತಿ ನೀಡಿದ್ದಾರೆ.
Last Updated : Feb 3, 2022, 1:21 PM IST