ಪುಣೆ(ಮಹಾರಾಷ್ಟ್ರ): ಒಂದು ಪಾನಿಪುರಿ ಪತಿ-ಪತ್ನಿಯ ನಡುವಿನ ಗಲಾಟೆಗೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ, ಇಬ್ಬರ ನಡುವಿನ ಜಗಳ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 23 ವರ್ಷದ ಪ್ರತೀಕ್ಷಾ ಮೃತ ಮಹಿಳೆ.
ಪುಣೆಯ ನಿವಾಸಿ ಗಹಿನಿನಾಥ್ ಸರ್ವಡೆ, ಇತ್ತೀಚೆಗೆ ಪತ್ನಿ ಪ್ರತೀಕ್ಷಾ (23) ಅವರನ್ನು ಸ್ವಗ್ರಾಮದಿಂದ ಪುಣೆಗೆ ಕರೆತಂದಿದ್ದರು. ಕೆಲ ದಿನಗಳ ಹಿಂದೆ ಗಹಿನಿನಾಥ್ ಮನೆಗೆ ಪಾನಿಪುರಿಯನ್ನು ತೆಗೆದುಕೊಂಡು ಹೋಗಿದ್ದಾನೆ. ನನ್ನ ಕೇಳದೆ ಯಾಕೆ ಪಾನಿಪುರಿ ತಂದೆ ಎಂದು ಕಳೆದ ಶನಿವಾರ ಪ್ರತೀಕ್ಷಾ ತನ್ನ ಪತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ.
ಆಗ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಗಹಿನಿನಾಥ್ ಪತ್ನಿ ಪ್ರತೀಕ್ಷಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತಳ ಪತಿ ಗಹಿನಿನಾಥ್ ಸರ್ವಡೆಯನ್ನು ಬಂಧಿಸಿದ್ದಾರೆ.