ನೆಲಮಂಗಲ :ರಾತ್ರಿಯಾದ್ರೆ ಸಾಕು ಹಿತ್ತಲಲ್ಲಿರುವ ಬಣವೆಗಳಿಗೆ ಬೆಂಕಿ ಇಟ್ಟು ಮನೆ ಸೇರಿಕೊಂಡು ಚಿನ್ನಾಭರಣ ದೋಚುತ್ತಿದ್ದ ಕಳ್ಳನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ .
ಬಸವರಾಜು ಎಂಬುವವರ ಬಣವೆಗೆ ಬೆಂಕಿ ಹಚ್ಚಿದ್ದ ರುದ್ರೇಶ್ ನೆಲಮಂಗಲ ತಾಲೂಕಿನ ಮಾದೇನಹಳ್ಳಿಯಲ್ಲಿಈತನ ಕಾಟದಿಂದ ಗ್ರಾಮದ ಜನ ರೋಸಿ ಹೋಗಿದ್ರು. ನಿನ್ನೆ ರಾತ್ರಿ ಗ್ರಾಮದ ಬಸವರಾಜು ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚುತ್ತಿದ್ದಾಗ, ಗ್ರಾಮಸ್ಥರ ಕೈಗೆ ಸಿಕ್ಕಿದ್ದಾನೆ. ಗ್ರಾಮಸ್ಥರು ರುದ್ರೇಶನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ರುದ್ರೇಶ್ ಈ ಹಿಂದೆಯೂ ಊರಿನ ಮಹಾದೇವ್, ನಂಜುಂಡಯ್ಯ, ರಂಗಸ್ವಾಮಿ ಸೇರಿದಂತೆ ಹಲವರ ಬಣವೆಗೆ ಬೆಂಕಿ ಹಚ್ಚಿದ್ದ. ಕುಡಿತದ ಚಟ ಅಂಟಿಸಿಕೊಂಡಿದ್ದ ರುದ್ರೇಶ್, ಮನೆಗಳ್ಳತನ, ಸರಗಳ್ಳತನ, ಸಿಕ್ಕಸಿಕ್ಕವರ ಮೊಬೈಲ್ ಕದಿಯುವುದನ್ನು ಚಾಳಿಯನ್ನಾಗಿಸಿಕೊಂಡಿದ್ದ. ರುದ್ರೇಶನ ಈ ಕೃತ್ಯಗಳಿಂದಾಗಿ ತಾಯಿ, ಹೆಂಡತಿ, ಮಕ್ಕಳು ಕೂಡ ದೂರಾಗಿದ್ದಾರೆ.
ಈತನನ್ನ ಪೊಲೀಸರು ಈ ಹಿಂದೆ ಬಂಧಿಸಿದ್ದರು. ಆಗ ಸರ್, ನನಗೆ ಹುಷಾರಿಲ್ಲ ಎಂದೋ ಇಲ್ಲ ಪೊಲೀಸರ ಎದುರೇ ಸತ್ತವನಂತೆ ನಟಿಸುತ್ತಿದ್ದ. ಅದಕ್ಕಾಗಿ ಪೊಲೀಸರು ಮೆಡಿಕಲ್ ಚೆಕಪ್ ಮಾಡಿಸೋಕೆ ಅಂತಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಚಿಕಪ್ ಮಾಡುತ್ತಿದ್ದ ವ್ಯೆದ್ಯೆ ಶ್ವೇತಾ ಅವರ ಬೆಲೆ ಬಾಳುವ ಮೊಬೈಲ್ ಫೋನ್‌ನನ್ನೇ ಕದ್ದಿರುವುದು ಸಿಸಿ ಟಿವಿಯಿಂದ ತಿಳಿದು ಬಂದಿದೆ. ರುದ್ರೇಶನನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಹೊಸಕೋಟೆ ಬಳಿ ಭೀಕರ ಅಪಘಾತ: ನಾಲ್ವರು ವಿದ್ಯಾರ್ಥಿಗಳು ಸಾವು, ಇಬ್ಬರು ಗಂಭೀರ