ಕರ್ನಾಟಕ

karnataka

ETV Bharat / crime

ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ ಆರೋಪ: ಎಂಟು ವಿದೇಶಿಗರನ್ನು ವಶಕ್ಕೆ ಪಡೆದ ಸಿಸಿಬಿ - ಎಂಟು ವಿದೇಶಿಗರನ್ನು ವಶಕ್ಕೆ ಪಡೆದ ಸಿಸಿಬಿ

ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ತೊಡಗಿರುವ ಆರೋಪದಡಿ ಸಿಸಿಬಿ ಪೊಲೀಸರು ಎಂಟು ವಿದೇಶಿಗರನ್ನು ವಶಕ್ಕೆ ಪಡೆದಿದ್ದಾರೆ.

prostitution allegation
ವೇಶ್ಯಾವಾಟಿಕೆ ದಂಧೆ

By

Published : Dec 17, 2022, 12:16 PM IST

Updated : Dec 17, 2022, 7:48 PM IST

ಸಿಸಿಬಿ ಜಂಟಿ ಆಯುಕ್ತ ಡಾ ಎಸ್ ಡಿ ಶರಣಪ್ಪ

ಬೆಂಗಳೂರು : ಬಾಡಿಗೆ ಮನೆ ಪಡೆದು ವೇಶ್ಯಾವಾಟಿ ದಂಧೆ ನಡೆಸುತ್ತಿರುವ ಆರೋಪದಡಿ ಎಂಟು ವಿದೇಶಿಗರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಂಗೇರಿ ಹಾಗೂ ಸೋಲದೇವನಹಳ್ಳಿಯ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿ, ಇಬ್ಬರು ಮಹಿಳೆಯರು ಹಾಗೂ ಆರು ಜನ ಪುರುಷರನ್ನು ವಶಕ್ಕೆ ಪಡೆಯಲಾಗಿದೆ.

ವಿದೇಶಿಗರಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೆಂಗೇರಿ ಮತ್ತು ಸೊಲದೇವನಹಳ್ಳಿಯ ಎರಡು ಕಡೆ ದಾಳಿ ಮಾಡಿದ್ದರು. ಈ ವೇಳೆ ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಪ್ರಾಥಮಿಕವಾಗಿ ವಿಚಾರಣೆ ವೇಳೆ ತಾವು ಭಾರತ ನಿವಾಸಿಗಳು ಎಂದಿದ್ದಾರೆ‌.

ಪಶ್ಚಿಮ ಬಂಗಾಳ ಮತ್ತು ತ್ರಿಪುರದ ಆಧಾರ್ ಕಾರ್ಡ್ಸ್, ಬಾಂಗ್ಲಾದೇಶದ ಕೋವಿಡ್ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಮತ್ತು ಕೆಲ ದಾಖಲೆಗಳು ದೊರೆತಿವೆ. ಆರೋಪಿಗಳು ಅಕ್ರಮ ವಲಸೆ ಬಂದವರು ಎಂಬ ಅನುಮಾನವಿದ್ದು, ತನಿಖೆ ಮಾಡಲಾಗ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ತಂಗಿಯ ಮೇಲೆ ಅಣ್ಣನಿಂದಲೇ ಲೈಂಗಿಕ ದೌರ್ಜನ್ಯ.. ಪೋಕ್ಸೋ ಪ್ರಕರಣ ದಾಖಲಿಸಿದ ಪೊಲೀಸರು

Last Updated : Dec 17, 2022, 7:48 PM IST

ABOUT THE AUTHOR

...view details