ಬೆಂಗಳೂರು :ಕಳ್ಳರು ಚಿನ್ನಾಭರಣ ಅಥವಾ ಹಣವನ್ನೇ ದೋಚಬೇಕು ಎಂಬ ನಿಯಮವಿಲ್ಲ. ಸುಲಭವಾಗಿ ಏನೇ ಸಿಕ್ಕರೂ ಕಳ್ಳರು ಕಳ್ಳತನ ಮಾಡ್ತಾರೆ ಅನ್ನೋದಕ್ಕೆ ಈ ಅಪರೂಪದ ಕಳ್ಳತನ ಸಾಕ್ಷಿ ಒದಗಿಸುತ್ತದೆ. ಹೈ-ಫೈ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಮನೆ ಮುಂದಿನ ಕಾಂಪೌಂಡ್‌ನಲ್ಲಿ ಇಟ್ಟಿದ್ದ ಪಾಟ್ ಅನ್ನು ಕಳ್ಳತನ ಮಾಡಿದ್ದಾಳೆ.
ಬೆಂಗಳೂರು: ಐಷಾರಾಮಿ ಕಾರಿನಲ್ಲಿ ಬಂದು ಹೂ ಕುಂಡ ಕದ್ದ ಕಳ್ಳಿ - ಪಾಟ್ ಕದ್ದ ಕಳ್ಳಿ
ಹೈ-ಫೈ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಮನೆ ಮುಂದಿನ ಕಾಂಪೌಂಡ್‌ನಲ್ಲಿ ಇಟ್ಟಿದ್ದ ಪಾಟ್ ಅನ್ನು ಕಳ್ಳತನ ಮಾಡಿದ್ದು, ಬೆಂಗಳೂರಿನ ಸಂಜಯನಗರನಲ್ಲಿ ಘಟನೆ ನಡೆದಿದೆ..
ಐಷಾರಾಮಿ ಕಾರಿನಲ್ಲಿ ಬಂದು ಹೂ ಕುಂಡ ಕದ್ದ ಕಳ್ಳಿ
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಎಂವಿ 2ನೇ ಸ್ಟೇಜ್ನಲ್ಲಿ ಇದೇ ತಿಂಗಳು 24ರಂದು ಚಾಲಾಕಿ ಕಳ್ಳಿ ಪಾಟ್ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಮನೆ ಮಾಲೀಕರಾದ ಕಾವ್ಯಾ ಸೆಲ್ವಂ ಎಂಬುವರು ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
Last Updated : Jan 26, 2022, 12:38 PM IST