ತಿರುವನಂತಪುರಂ(ಕೇರಳ):ಮಾಲಿವುಡ್ನ ಖ್ಯಾತ ನಟ ರಮೇಶ್ ವಲಿಯಶಾಳ ಅವರು ಶನಿವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಮಲಯಾಳಂ ಸಿನಿಮಾ ರಂಗದ ಮೂಲಗಳು ತಿಳಿಸಿವೆ.
ತಮ್ಮ ನಿವಾಸದ ಸಮೀಪವೇ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ವಲಿಯಶಾಳ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ರಮೇಶ್ ಎರಡು ದಿನಗಳ ಹಿಂದೆ ತಮ್ಮ ಹೊಸ ಪ್ರಾಜೆಕ್ಟ್ಗಾಗಿ ಶೂಟಿಂಗ್ ಸ್ಥಳದಿಂದ ಹಿಂದಿರುಗಿದ್ದರು. ಈಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ.
ಕೇರಳ ರಾಜ್ಯದ ಅತ್ಯಂತ ಜನಪ್ರಿಯ ಟಿವಿ ಧಾರಾವಾಹಿ ನಟರಲ್ಲಿ ಒಬ್ಬರಾಗಿದ್ದ ರಮೇಶ್, ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 22 ವರ್ಷಗಳಿಂದ ನಾಟಕ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ರಮೇಶ್ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ:ಸೈಕ್ಲಿಂಗ್ ಸ್ಪರ್ಧೆಯಲ್ಲೇ ಹೃದಯಾಘಾತ: ಹುಬ್ಬಳ್ಳಿಯ ಸೈಕ್ಲಿಸ್ಟ್ ವಿಧಿವಶ