ಕರ್ನಾಟಕ

karnataka

ಬಂಗಾಳ ಚುನಾವಣೆಯಲ್ಲಿ ಭುಗಿಲೆದ್ದ ಹಿಂಸಾಚಾರ: ನಾಲ್ವರು ಟಿಎಂಸಿ ಬೆಂಬಲಿಗರು ಸಾವು

By

Published : Apr 10, 2021, 11:32 AM IST

Updated : Apr 10, 2021, 4:00 PM IST

Poll violence in Mathabhanga
ಮಾತಾಭಂಗ ಪ್ರದೇಶದಲ್ಲಿ ಗುಂಡಿನ ದಾಳಿ

15:54 April 10

'ಇದೊಂದು ಘೋರ ಹತ್ಯೆ'

ಮುಖ್ಯ ಚುನಾವಣಾಧಿಕಾರಿಗೆ ಟಿಎಂಸಿ ಪತ್ರ

ಘಟನೆ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ (ಸಿಇಒ)ಗೆ ಪತ್ರ ಬರೆದಿರುವ ಟಿಎಂಸಿ, ನಾಲ್ವರ ಸಾವು - ಇದೊಂದು ಘೋರ ಹತ್ಯೆ. ಕೇಂದ್ರದ ಪಡೆಗಳಿಂದ ಮೂವರು ಮುಗ್ಧ ಜನರನ್ನು ಕ್ರೂರವಾಗಿ ಗಾಯಗೊಳಿಸಲಾಗಿದೆ ಎಂದು ಆರೋಪಿಸಿದೆ. 

11:27 April 10

ಗಲಾಟೆ ನಿಯಂತ್ರಿಸಲು ಕೂಚ್ ಬೆಹಾರ್ ಜಿಲ್ಲೆಯ ಮಾತಾಭಂಗ ಹಾಗೂ ಶೀತಲ್​​ಕೂಚಿ ಪ್ರದೇಶದಲ್ಲಿ ಸಿಎಪಿಎಫ್ ಸಿಬ್ಬಂದಿ ಗುಂಡು ಹಾರಿಸಿದ್ದು, ನಾಲ್ವರು ಟಿಎಂಸಿ ಬೆಂಬಲಿಗರು ಸಾವನ್ನಪ್ಪಿದ್ದಾರೆ.

ಬಂಗಾಳ ಚುನಾವಣೆಯಲ್ಲಿ ಭುಗಿಲೆದ್ದ ಹಿಂಸಾಚಾರ

ಕೂಚ್ ಬೆಹಾರ್ (ಪಶ್ಚಿಮ ಬಂಗಾಳ):ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಇಂದು ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಾಲ್ವರು ಟಿಎಂಸಿ ಬೆಂಬಲಿಗರು ಮೃತಪಟ್ಟಿದ್ದಾರೆ.  

ಕೂಚ್ ಬೆಹಾರ್​​ನ ಮಾತಾಭಂಗ ಹಾಗೂ ಶೀತಲ್​​ಕೂಚಿ ಪ್ರದೇಶದಲ್ಲಿ ಮತದಾನದ ವೇಳೆ ಗಲಾಟೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್​) ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.  

ಮೃತರನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಗರಾದ ಹಮೀದುಲ್ ಹಕ್, ಮೊನಿರುಲ್ ಹಕ್, ಸಮಿಯುಲ್ ಮಿಯಾ, ಅಮ್ಜಾದ್ ಹೊಸೈನ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಚುನಾವಣಾ ಆಯೋಗ ಸಂಪೂರ್ಣ ವರದಿ ಕೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕಿ ಡೋಲಾ ಸೇನ್, ಕೇಂದ್ರ ಪಡೆಗಳು ತಮ್ಮ ಮಿತಿಯನ್ನು ಮೀರಿದ್ದು, ಜನರಿಗೆ ಅನ್ಯಾಯ ಮಾಡುತ್ತಿವೆ. ಮಾತಾಭಂಗದಲ್ಲಿ ಕೇಂದ್ರ ಪಡೆ ಗುಂಡು ಹಾರಿಸಿದ ಪರಿಣಾಮ ಒಬ್ಬರು ಮೃತಪ್ಟಿದ್ದು, ಮೂವರು ಗಾಯಗೊಂಡಿದ್ದಾರೆ.  ಶೀತಲ್​​ಕೂಚಿಯಲ್ಲಿ ಮೂವರು ಬಲಿಯಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

Last Updated : Apr 10, 2021, 4:00 PM IST

ABOUT THE AUTHOR

...view details