ಚಿಕ್ಕಬಳ್ಳಾಪುರ:ಜೂಜು ಆಡುತ್ತಿದ್ದಾರೆಂದು ಕಲ್ಯಾಣ ಮಂಟಪದ ಮೇಲೆ ಪೊಲೀಸರು ದಾಳಿ ಮಾಡಿ, ಅಲ್ಲಿದ್ದವರಿಗೆ ಹಿಗ್ಗಾಮುಗ್ಗಾ ಥಳಿಸಿ ಹಣ ವಸೂಲಿ ಮಾಡಿ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಶಿಡ್ಲಘಟ್ಟ ನಗರದಲ್ಲಿ ಕೇಳಿಬಂದಿದೆ.
ಮದುವೆ ಸಮಾರಂಭದ ಹಿಂದಿನ ದಿನ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪೊಲೀಸರು ದಾಳಿ ನಡೆಸಿ 14 ಜನರನ್ನು ವಶಕ್ಕೆ ಪಡೆದು ಹೊಡೆದಿದ್ದಾರೆ. ಬಳಿಕ ನಮ್ಮಿಂದ ಸುಮಾರು 3 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನ್ವರ್ ಆರೋಪಿಸಿದ್ದಾರೆ.