ಕರ್ನಾಟಕ

karnataka

ETV Bharat / crime

ವಿದಾಯದ ಸ್ಟೇಟಸ್​ ಹಾಕಿದ್ದ ಸಚಿನ್​ ವಝೆ ಈಗ ಎನ್​ಐಎ ಮುಂದೆ ಹಾಜರು

ಮನ್ಸುಖ್​ ಹಿರೇನ್ ನಿಗೂಢ ಸಾವಿನ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಪೊಲೀಸ್​ ಅಧಿಕಾರಿ ಸಚಿನ್​ ವಝೆ ಇದೀಗ ಎನ್​ಐಎ ಮುಂದೆ ಹಾಜರಾಗಿದ್ದಾರೆ.

Police Officer Sachin Vaze appears before NIA
ಸಚಿನ್​ ವಾಜೆ

By

Published : Mar 13, 2021, 1:20 PM IST

ಮುಂಬೈ: ಕೆಲ ಹೊತ್ತಿನ ಹಿಂದಷ್ಟೇ 'ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ' ಎಂದು ವಾಟ್ಸ್​​​ ಆ್ಯಪ್​ನಲ್ಲಿ ಸ್ಟೇಟಸ್​ ಹಾಕಿಕೊಂಡಿದ್ದ ಪೊಲೀಸ್​ ಅಧಿಕಾರಿ ಸಚಿನ್​ ವಝೆ ಇದೀಗ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕಚೇರಿಗೆ ಆಗಮಿಸಿದ್ದಾರೆ.

ಮನ್ಸುಖ್​ ಹಿರೇನ್ ನಿಗೂಢ ಸಾವಿನ ಪ್ರಕರಣದಲ್ಲಿ ಸಚಿನ್​ ವಝೆ ಹೆಸರು ಕೇಳಿಬಂದಿತ್ತು. ಬಂಧನ ಭೀತಿ ಹಿನ್ನೆಲೆ ಥಾಣೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪೂರ್ವ ಬಂಧನ ಜಾಮೀನು ಅರ್ಜಿಯನ್ನು ಸಚಿನ್ ಸಲ್ಲಿಸಿದ್ದರು.

ಇಂದು ತಮ್ಮ ವಾಟ್ಸ್​​​ ಆ್ಯಪ್​ನಲ್ಲಿ ಸಚಿನ್, ಮಾರ್ಚ್ 3, 2004 ರಂದು ಕೆಲವು ಅಧಿಕಾರಿಗಳು ನಕಲಿ ಪ್ರಕರಣದಲ್ಲಿ ನನ್ನನ್ನು ಬಂಧಿಸಿದ್ದರು. ನನ್ನ ಸಹೋದ್ಯೋಗಿಗಳು ನನ್ನನ್ನು ಮತ್ತೆ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಸ್ಟೇಟಸ್​ ಹಾಕಿಕೊಂಡಿದ್ದರು.

ಸಚಿನ್​ ವಾಜೆ ವಾಟ್ಸ್​​​ ಆ್ಯಪ್​ ಸ್ಟೇಟಸ್

ಇದನ್ನೂ ಓದಿ: 'ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ ' ಎಂದು ಪೊಲೀಸ್ ಸ್ಟೇಟಸ್​ ಹಾಕಿದ ಪೊಲೀಸ್​ ಅಧಿಕಾರಿ ಸಚಿನ್​ ವಾಜೆ

ಕೆಲ ದಿನಗಳ ಹಿಂದೆ ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್​ಯುವಿ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಮುಂಬೈ ಮೂಲದ ಮನ್ಸುಖ್​ ಹಿರೇನ್ ಅವರು ಸ್ಕಾರ್ಪಿಯೋ ಕಾರು ಮಾಲೀಕ ಎಂದು ಹೇಳಲಾಗಿತ್ತು.

ಆದರೆ, ಮಾರ್ಚ್ 5ರಂದು ಥಾಣೆಯ ನದಿಯೊಂದರಲ್ಲಿ ಮನ್ಸುಖ್​ ಹಿರೇನ್ ಮೃತದೇಹ ಪತ್ತೆಯಾಗಿತ್ತು. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ. ಆದರೆ ಆ ಸ್ಕಾರ್ಪಿಯೋ ಕಾರು ಮಾಲೀಕ ಮೃತ ಮನ್ಸುಖ್​ ಹಿರೇನ್ ಅಲ್ಲ, ಥಾಣೆ ಮೂಲದ ಸ್ಯಾಮ್ ನ್ಯೂಟನ್​​ ಎಂಬವರಿಗೆ ಸೇರಿದ್ದು ಎನ್ನುವ ಸತ್ಯಾಂಶ ತಿಳಿದು ಬಂದಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details