ತಿರುಮಲ (ಆಂಧ್ರ ಪ್ರದೇಶ): ಛತ್ತೀಸ್ಗಢ ಮೂಲದ ಬಾಲಕನ ಅಪಹರಣ ಪ್ರಕರಣದ ಆರೋಪಿಯ ಗುರುತು ಹಾಗೂ ಆತನ ಕುಟುಂಬದ ವಿಳಾಸವನ್ನು ಆಂಧ್ರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಫೆ. 27ರಂದು ಆಂಧ್ರದ ಚಿತ್ತೂರು ಜಿಲ್ಲೆಯ ತಿರುಮಲಕ್ಕೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಛತ್ತೀಸ್ಗಢದ ಕುಟುಂಬವೊಂದು ಬಂದಿತ್ತು. ಆದರೆ ಈ ಕುಟುಂಬದ 6 ವರ್ಷದ ಬಾಲಕ ಕಾಣೆಯಾಗಿದ್ದ. ಪೋಷಕರ ದೂರಿನ ಮೇರೆಗೆ ತಿರುಪತಿ ನಗರ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು.
ಘಟನೆ ನಡೆದ ದಿನ ಬಸ್ ನಿಲ್ದಾಣದ ಸಮೀಪ ಪೋಷಕರೊಂದಿಗೆ ನಿಂತಿದ್ದ ಬಾಲಕನ ಪಕ್ಕದಲ್ಲೇ ವ್ಯಕ್ತಿಯೊಬ್ಬ ಪತ್ರಿಕೆ ಓದುತ್ತಾ ಮಲಗಿದ್ದ. ಈತನೇ ಬಾಲಕನನ್ನು ಕಿಡ್ನ್ಯಾಪ್ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತಿಳಿದು ಬಂದಿದೆ.