ಕರ್ನಾಟಕ

karnataka

ETV Bharat / crime

ಮೂವರು ಹಂದಿ ಕಳ್ಳರ ಬಂಧನ : ಹಳೇಹುಬ್ಬಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ - ಮೂವರು ಹಂದಿ ಕಳ್ಳರ ಬಂಧನ

ಪ್ರಕರಣದ ಕಾರ್ಯಾಚರಣೆಗೆ ಇಳಿದ ಹಳೇಹುಬ್ಬಳ್ಳಿ ಠಾಣೆ ಇನ್ಸ್‌ಪೆಕ್ಟರ್ ಎ ಜಿ ಚೌಹಾಣ್‌ ನೇತೃತ್ವದ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ..

pig thieves arrested by the police of hale hubballi
ಮೂವರು ಹಂದಿ ಕಳ್ಳರ ಬಂಧನ

By

Published : Feb 11, 2022, 12:48 PM IST

ಹುಬ್ಬಳ್ಳಿ :ಹಳೇಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಮೂವರು ಹಂದಿ ಕಳ್ಳರನ್ನು ಬಂಧಿಸಲಾಗಿದೆ. ಇಲ್ಲಿನ ಗುಡಿಹಾಳ ರೋಡ್‌ನಲ್ಲಿರುವ ಫಿಗರಿ ಫಾರ್ಮಿನಿಂದ ಇತ್ತೀಚೆಗೆ ಹಂದಿ ಕಳ್ಳತನವಾಗಿತ್ತು.

ಪ್ರಕರಣದ ಕಾರ್ಯಾಚರಣೆಗೆ ಇಳಿದ ಪೊಲೀಸರು ಕಳವು ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಕಳ್ಳರು ಫಾರ್ಮ್‌ನ ಕಾಂಪೌಂಡ್ ಒಡೆದು ಸುಮಾರು 53 ಹಂದಿಗಳನ್ನು ಕದ್ದೊಯ್ದಿದ್ದರು. ಬಳಿಕ ಈ ಹಂದಿಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮೊಬೈಲ್ ಖರೀದಿಸಿದ್ದರು.

ಪ್ರಕರಣದ ಕಾರ್ಯಾಚರಣೆಗೆ ಇಳಿದ ಹಳೇಹುಬ್ಬಳ್ಳಿ ಠಾಣೆ ಇನ್ಸ್‌ಪೆಕ್ಟರ್ ಎ ಜಿ ಚೌಹಾಣ್‌ ನೇತೃತ್ವದ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 15,500 ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರೀಗ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ABOUT THE AUTHOR

...view details