ಮೈಸೂರು:ವ್ಯಕ್ತಿಯ ಮೇಲೆ ಹಲ್ಲೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದಾದ ಘಟನೆ ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ. ರಂಗಸಮುದ್ರ ಪಿಡಿಒ ತಿಲಕ್ ರಾಜ್ ವಿರುದ್ಧ ಗೂಂಡಾ ವರ್ತನೆ ಆರೋಪ ಕೇಳಿ ಬಂದಿದೆ.
ಸಾರ್ವಜನಿಕರ ಮೇಲೆ ಏಕವಚನದಲ್ಲೇ ಪದ ಬಳಕೆ ಮಾಡಿರುವ ತಿಲಕ್ ರಾಜ್ ಹಲ್ಲೆಗೆ ಮುಂದಾಗಿದ್ದಾನೆ. ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆಗಳನ್ನ ಹರಾಜು ನಡೆಸದೆ ಏಕಾಏಕಿ ಉಳ್ಳವರಿಗೆ ಪಿಡಿಒ ತಿಲಕ್ ರಾಜ್ ನೀಡಿದ್ದಾನೆ. ಮಳಿಗೆ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.