ಪಾಟ್ನಾ (ಬಿಹಾರ):ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜೀಪ್ವೊಂದು ಬಿಹಾರದ ಪಾಟ್ನಾ ಜಿಲ್ಲೆಯ ಗಂಗಾ ನದಿಯಲ್ಲಿ ಮುಳುಗಿದ್ದು, 9 ಮಂದಿ ಮೃತಪಟ್ಟಿದ್ದಾರೆ.
ಗಂಗಾ ನದಿಯಲ್ಲಿ ಮುಳುಗಿದ ಜೀಪ್: 9 ಮಂದಿ ಸಾವು, 12 ಪ್ರಯಾಣಿಕರು ನಾಪತ್ತೆ - ಬಿಹಾರದ ಪಾಟ್ನಾ ಜಿಲ್ಲೆಯ ಗಂಗಾ ನದಿ
20ಕ್ಕೂ ಹೆಚ್ಚು ಜನರಿದ್ದ ಜೀಪ್ವೊಂದು ಗಂಗಾ ನದಿಯಲ್ಲಿ ಮುಳುಗಿದ್ದು, ಸ್ಥಳೀಯರ ಸಹಾಯದೊಂದಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಗಂಗಾ ನದಿಯಲ್ಲಿ ಮುಳುಗಿದ 12ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜೀಪ್
ದಾನಪುರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಮಾಹಿತಿ ತಿಳಿದ ಬಳಿಕ ಬಂದಿರುವ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ನಾಪತ್ತೆಯಾಗಿರುವ 12 ಮಂದಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಎಸ್ಡಿಆರ್ಎಫ್ ತಂಡ ಕೂಡ ಬಂದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ನದಿಗೆ ಜೀಪ್ ಉರುಳಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿಗಾಗಿ ನೀರೀಕ್ಷಿಸಲಾಗಿದೆ.
Last Updated : Apr 23, 2021, 1:59 PM IST