ಕೊಳ್ಳೇಗಾಲ(ಚಾಮರಾಜನಗರ) :ಸಾಲ ತೀರಿಸಲು ಹಣ ನೀಡದ ಹಿನ್ನೆಲೆಯಲ್ಲಿ ತಂದೆ ಎದುರೇ ಮಗ ಚಾಕುವಿನಿಂದ ಕತ್ತು ಮತ್ತು ಕೈ ಕೊಯ್ದುಕೊಂಡ ಘಟನೆ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಸುರೇಶ್‌ಕುಮಾರ್ ಎಂಬುವರ ಪುತ್ರ ಸಂತೋಷ್ ಕುಮಾರ್ ಎಂಬುವರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಸಂತೋಷ್ ರಂಗನಾಥನ ದೇವಾಲಯದ ದಾಸೋಹ ಭವನದಲ್ಲಿ ಅಡುಗೆ ಭಟ್ಟನಾಗಿ ಕಾರ್ಯ ನಿರ್ವಹಿಸುತ್ತಿದ್ದ.