ಮೈಸೂರು:2016ರಲ್ಲಿ ಪಡುವಾರಳ್ಳಿಯ ದೇವು ಕೊಲೆ ಪ್ರಕರಣಲ್ಲಿ 11 ಮಂದಿ ತಪ್ಪಿತಸ್ಥರೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದ್ದು, ಇಂದು ಶಿಕ್ಷೆ ಪ್ರಮಾಣವನ್ನ ಪ್ರಕಟಿಸಲಿದೆ.
ಮೈಸೂರು ನಗರದ ಪಡುವಾರಳ್ಳಿಯಲ್ಲಿ 2016ರಲ್ಲಿ ದೇವು ಅವರನ್ನ ಗುಂಪೊಂದು ಕೊಲೆ ಮಾಡಿತ್ತು. ಈ ಪ್ರಕರಣದ ಆರೋಪದ ಮೇಲೆ 29 ಮಂದಿಯ ವಿರುದ್ಧ ಜಯಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ನಗರದಲ್ಲಿ ಸಂಚಲನ ಮೂಡಿಸಿತ್ತು.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯುಟರ್ ಸುದೀಪ್ ಬಂಗೇರಾ ವಾದ ಮಂಡಿಸಿದ್ದರು. ಕೊಲೆ ಪ್ರಕರಣದಲ್ಲಿ ೧೧ ಮಂದಿಯನ್ನು ತಪ್ಪಿತಸ್ಥರೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶ ನೀಡಿದೆ. ಮಾಜಿ ಪಾಲಿಕೆ ಸದಸ್ಯ ಮಹದೇಶ್ ಅಲಿಯಾಸ್ ಅವ್ವ ಮಹದೇಶ್ ಹಾಗೂ ಅವರ ಸೋದರ ಮಂಜು ಸೇರಿದಂತೆ 18 ಮಂದಿಯನ್ನು ಆರೋಪದಿಂದ ಖುಲಾಸೆಗೊಳಿಸಲಾಗಿದೆ.
ತಪ್ಪಿತಸ್ಥರ ಹೆಸರು: ಪವನ್, ಕುಮಾರ್, ಸುನೀಲ್, ರಾಕೇಶ್, ಕಾರ್ತಿಕ್, ಮಂಜು, ಮಣಿಕಂಠ, ನಾಗೇಂದ್ರ, ಕೆ.ಎಲ್.ಸುನೀಲ್, ವಿಜಯಕುಮಾರ್, ಕೆ.ಎಂ.ರಘು, ಆರ್.ಎಕ್ಸ್ ನವೀನ್.