ಕರ್ನಾಟಕ

karnataka

ETV Bharat / crime

'ಪದ್ಮ ಪ್ರಶಸ್ತಿ' ಪುರಸ್ಕೃತನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ - Padma awardee in Assam accused of sexually abusing minor girl

ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಪದ್ಮ ಪ್ರಶಸ್ತಿ' ಪಡೆದ ವ್ಯಕ್ತಿಯೊಬ್ಬರು ತಮ್ಮ ಪೋಷಣೆಯಲ್ಲಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

Padma awardee in Assam accused of sexually abusing minor girl
ಅಸ್ಸೋಂನಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ

By

Published : Jan 5, 2022, 7:45 PM IST

ಗುವಾಹಟಿ:ಅಸ್ಸಾಂನ ಪದ್ಮ ಪ್ರಶಸ್ತಿ ಪುರಸ್ಕೃತ ಗಣ್ಯ ವ್ಯಕ್ತಿಯೊಬ್ಬರ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣ ಕೋರ್ಟ್‌ ತಲುಪುತ್ತಿದ್ದಂತೆ ಆರೋಪಿ ಬಂಧನದಿಂದ ಪಾರಾಗಲು ಗುವಾಹಟಿ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ರಜೆ ಕಾಲದ ಪೀಠದಲ್ಲಿದ್ದ ನ್ಯಾ.ಅರುಣ್‌ ದೇವ್‌ ಚೌಧರಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಈ ಸಂಬಂಧ ಡಿಸೆಂಬರ್‌ 28 ರಂದು ಆದೇಶ ಹೊರಡಿಸಿರುವ ಕೋರ್ಟ್‌, ಪೋಕ್ಸೊ ಕಾಯ್ದೆಯಡಿ ಈ ಪ್ರಕರಣ ಬರುವುದರಿಂದ ಗಂಭೀರ ಸ್ವರೂಪದಲ್ಲಿದೆ. ಹೀಗಾಗಿ ಸಂಪೂರ್ಣ ಮಾಹಿತಿಯನ್ನು ಜನವರಿ 7ರೊಳಗೆ ನೀಡಬೇಕೆಂದು ಪೊಲೀಸರಿಗೆ ಸೂಚಿಸಿದೆ.

ಇನ್ನೊಂದೆಡೆ, ತಮ್ಮ ಮಾನಹಾನಿ ಮಾಡಲು ಎಫ್‌ಐಆರ್ ದಾಖಲಿಸಿದ್ದು, ದೂರಿನಲ್ಲಿ ಸಂತ್ರಸ್ತೆ ಯಾವುದೇ ನಿರ್ದಿಷ್ಟ ಹೇಳಿಕೆ ನೀಡಿಲ್ಲ ಎಂದು ಆರೋಪಿ ತಿಳಿಸಿದ್ದಾರೆ.

ಈ ಹಿಂದೆ, ಇಬ್ಬರು ಬಾಲಕಿಯರಿಗೆ ಆಶ್ರಯ ನೀಡುವಂತೆ ಆರೋಪಿಯನ್ನು ಕೋರಲಾಗಿತ್ತು. ಅದರಂತೆ ಪತ್ನಿಯ ಆಶ್ರಯದಲ್ಲಿ ಬಾಲಕಿಯರನ್ನು ತಮ್ಮ ಮನೆಯಲ್ಲೇ 2020ರ ಸೆಪ್ಟೆಂಬರ್‌ನಿಂದ ಪೋಷಿಸಲಾಗುತ್ತಿತ್ತು. ಈ ವೇಳೆ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ-ಸಿಡಬ್ಲ್ಯೂಸಿ ಆರೋಪಿಸಿದೆ.

ಇದನ್ನೂ ಓದಿ:ಅಲಿಗಢ ಧರ್ಮ ಸಂಸದ್​ಗೂ ಮುನ್ನ ಅನ್ನಪೂರ್ಣ ಭಾರತಿಗೆ ಬೆದರಿಕೆ ಕರೆ, ಭದ್ರತೆಗೆ ಮನವಿ

For All Latest Updates

TAGGED:

ABOUT THE AUTHOR

...view details