ಕರ್ನಾಟಕ

karnataka

ETV Bharat / crime

ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ನಿಲ್ಲಿಸಿದ್ದ ವ್ಯಕ್ತಿಯ ಗುರುತು ಪತ್ತೆ - Mukesh Ambani

मुकेश अंबनी के घर के बाहर बारूद दे भरी स्कॉर्पिओ कार खडी करने वाले आरोपी की पहेचान होने की खबर सुत्रों से मिल रही है. इस स्कॉर्पिओ के पिछे एक सफेद रंग की इनोव्हा कार मुंबई पुलिस ने ढुंड निकाली आहे. उसिकी मदत से मुख्य आरोपीतर पहुंचने की तयारी मुंबई पुलीस ने की है. जल्दही मुख्य आरोपीको पकडने का दावा मुंबई पुलीस के क्राईम ब्रँच ने कीया है.

Man who parked SUV outside Mukesh Ambani's house identified
ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ಕಾರು ನಿಲ್ಲಿಸಿದ ವ್ಯಕ್ತಿಯ ಗುರುತಿಸಿದ ಪೊಲೀಸರು

By

Published : Feb 27, 2021, 10:25 AM IST

Updated : Feb 27, 2021, 11:01 AM IST

10:16 February 27

ಮುಖೇಶ್​​ ಅಂಬಾನಿ ಮನೆಯ ಮುಂದೆ ಸ್ಕಾರ್ಪಿಯೋ ಕಾರು ನಿಲ್ಲಿಸಿದ್ದ ವ್ಯಕ್ತಿಯ ಗುರುತನ್ನು ಮುಂಬೈ ಅಪರಾಧ ವಿಭಾಗ​ ಪೊಲೀಸರು ಪತ್ತೆ ಹೆಚ್ಚಿದ್ದಾರೆ.

ಮುಂಬೈ:ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ ಸಂಬಂಧ ಇದೀಗ ಓರ್ವ ಶಂಕಿತನನ್ನು ಮುಂಬೈ ಅಪರಾಧ ವಿಭಾಗ​ ಪೊಲೀಸರು ಗುರುತಿಸಿದ್ದಾರೆ.  

ಗುರುವಾರ ಮುಂಬೈನಲ್ಲಿರುವ ಮುಖೇಶ್​​ ಅಂಬಾನಿ ನಿವಾಸ ಆಂಟಿಲಿಯಾ ಬಳಿ 21 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಲು 10 ತಂಡಗಳನ್ನು ರಚನೆ ಮಾಡಲಾಗಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಜಂಟಿಯಾಗಿ ತನಿಖೆ ನಡೆಸುತ್ತಿವೆ.  

ಇದನ್ನೂ ಓದಿ: ಅಂಬಾನಿ ನಿವಾಸದ ಬಳಿ ಜಿಲೆಟಿನ್ ಇರಿಸಿದ ಕಾರು ನಿಲ್ಲಿಸುತ್ತಿರುವ ಸಿಸಿಟಿವಿ ವಿಡಿಯೋ!

ಕಾರನ್ನು ಪಾರ್ಕ್‌ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಮನೆಯ ಮುಂದೆ ಸ್ಕಾರ್ಪಿಯೋ ಕಾರು ನಿಲ್ಲಿಸಿದ್ದ ವ್ಯಕ್ತಿಯ ಗುರುತನ್ನು ಮುಂಬೈ ಅಪರಾಧ ವಿಭಾಗ​ ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಸ್ಕಾರ್ಪಿಯೋ ಕಾರಿನ ಹಿಂದೆ ಬಿಳಿ ಬಣ್ಣದ ಇನೋವಾ ಕಾರು ಕೂಡ ಕಂಡು ಬಂದಿದ್ದು, ಇದರ ಸುಳಿವಿನ ಆಧಾರದ ಮೇಲೆ ಪ್ರಮುಖ ಆರೋಪಿಯನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.  

Last Updated : Feb 27, 2021, 11:01 AM IST

ABOUT THE AUTHOR

...view details