ಬಾಗಲಕೋಟೆ : ಶೌಚಾಲಯ ಕಟ್ಟುವ ವಿಷಯವಾಗಿ ಎರಡು ಕುಟುಂಬಗಳ ಮಧ್ಯೆ ಉಂಟಾದ ಘರ್ಷಣೆ, ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕ ಬಾದವಾಡಗಿ ಗ್ರಾಮದಲ್ಲಿ ನಡೆದಿದೆ.
ಯಲ್ಲನಗೌಡ ಗೌಡರ (35) ಎಂಬಾತನೇ ವ್ಯಕ್ತಿ ಮೃತ ವ್ಯಕ್ತಿ. ಶಂಕರಗೌಡ, ಸಕ್ಕೂಬಾಯಿ ಎಂಬುವರು ಸೇರಿದಂತೆ ನಾಲ್ವರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾದೇವಪ್ಪ ವಂದಾಲಿ ಎಂಬುವರು ತಮ್ಮ ಮನೆ ಹತ್ತಿರ ಶೌಚಾಲಯ ನಿರ್ಮಿಸುತ್ತಿದ್ದರು. ಇದರಿಂದ ಮಹಾದೇವಪ್ಪ ವಂದಾಲಿ ಮತ್ತು ಯಲ್ಲನಗೌಡ ಗೌಡರ ಎಂಬುವರ ಕುಟುಂಬಸ್ಥರ ಮಧ್ಯೆ ಆರಂಭವಾದ ಮಾತಿನ ಘರ್ಷಣೆ ನಡೆದಿದೆ. ಎರಡೂ ಕುಟುಂಬದವರು ಪರಸ್ಪರ ಬಡಿಗೆಯಿಂದ ಹೊಡೆದಾಡಿಕೊಂಡಿದ್ದಾರೆ.