ಭತ್ಪರ (ಪಶ್ಚಿಮ ಬಂಗಾಳ): ಚುನಾವಣೋತ್ತರ ಹಿಂಸಾಚಾರಗಳು ಪಶ್ಚಿಮ ಬಂಗಾಳದಲ್ಲಿ ಮುಂದುವರೆದಿದ್ದು, ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಾಂಬ್ ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಉತ್ತರ 24 ಪರಗಣ ಜಿಲ್ಲೆಯ ಭತ್ಪರ ಪ್ರದೇಶಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದು, ಘಟನೆಯಲ್ಲಿ ಇನ್ನೂ ಐವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೆಲ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರವಾಗಿ ಖಂಡಿಸಿದ್ದು, ಕೃತ್ಯದ ಹಿಂದೆ ಬಿಜೆಪಿಯ ಅರ್ಜುನ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಿದೆ.
ಉತ್ತರ 24 ಪರಗಣ ಜಿಲ್ಲೆಯ ಭತ್ಪರ ಪ್ರದೇಶಲ್ಲಿ ಬಾಂಬ್ ದಾಳಿ ಇದನ್ನೂ ಓದಿ:ಕೂಚ್‌ಬೆಹಾರ್‌ನಲ್ಲಿ ರಾಜ್ಯಪಾಲ ಜಗದೀಪ್ ಧಂಖರ್‌ಗೆ ಕಪ್ಪು ಬಾವುಟ ತೋರಿಸಿದ ಪ್ರತಿಭಟನಾಕಾರರು
ಮೇ 2ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಕ್ಷಣದಿಂದಲೇ ರಾಜ್ಯದಲ್ಲಿ ಹಿಂಸಾಚಾರ ಉಲ್ಬಣಗೊಂಡಿದೆ. ಬಿಜೆಪಿಯ ಹಲವು ಹಾಗೂ ಟಿಎಂಸಿಯ ಕೆಲ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಬಿಜೆಪಿ ಕಚೇರಿಗಳು, ಕಾರ್ಯಕರ್ತರ ಮನೆ ಧ್ವಂಸವಾಗಿವೆ. ಎರಡೂ ಪಕ್ಷಗಳು ಒಬ್ಬರ ವಿರುದ್ಧ ಒಬ್ಬರು ಆರೋಪಿಸಿಕೊಳ್ಳುತ್ತಿದ್ದು, ಹಿಂಸಾಚಾರ ಮುಂದುವರೆದಿದೆ.
ನಂದಿಗ್ರಾಮ, ಕೂಚ್ ಬೆಹಾರ್ ಸೇರಿದಂತೆ ಹಿಂಸಾಚಾರ ನಡೆದ ಸ್ಥಳಗಳಿಗೆ, ಸಂತ್ರಸ್ತರ ಮನೆಗಳಿಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.