ಕರ್ನಾಟಕ

karnataka

By

Published : May 17, 2021, 11:29 AM IST

ETV Bharat / crime

ಕಾಳಸಂತೆಯಲ್ಲಿ ಆಕ್ಸಿಜನ್​ ಸಾಂದ್ರಕಗಳ ಮಾರಾಟ: ಕೊನೆಗೂ ಉದ್ಯಮಿ ಕಲ್ರಾ ಬಂಧನ

ಅಕ್ರಮವಾಗಿ ಆಕ್ಸಿಜನ್​ ಸಾಂದ್ರಕಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಪರಾರಿಯಾಗಿದ್ದ ಉದ್ಯಮಿ ನವನೀತ್ ಕಲ್ರಾರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

O2 concentrator black-marketing mastermind Navneet Kalra arrested
ಉದ್ಯಮಿ ನವನೀತ್ ಕಲ್ರಾ

ನವದೆಹಲಿ: ದೇಶದಾದ್ಯಂತ ಅನೇಕ ರೋಗಿಗಳು ಆಮ್ಲಜನಕದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಆಕ್ಸಿಜನ್​ ಸಾಂದ್ರಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಉದ್ಯಮಿ ನವನೀತ್ ಕಲ್ರಾರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಖಾನ್ ಮಾರುಕಟ್ಟೆ​ಯಲ್ಲಿರುವ ನವನೀತ್ ಒಡೆತನದ ಪ್ರಸಿದ್ಧ ಖಾನ್​ ಚಾಚಾ ರೆಸ್ಟೋರೆಂಟ್​​ ಸೇರಿದಂತೆ ಆಕ್ಸಿಜನ್​ ಸಾಂದ್ರಕ ಸಂಗ್ರಹಿಸಿಟ್ಟಿದ್ದ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈವರೆಗೆ ನವನೀತ್ ಒಡೆತನದ ಮೂರು ರೆಸ್ಟೋರೆಂಟ್​ಗಳಿಂದ ಸುಮಾರು 500 ಆಕ್ಸಿಜನ್​ ಸಾಂದ್ರಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಆಕ್ಸಿಜನ್ ಕಾನ್ಸಂಟ್ರೇಟರ್ ಅಕ್ರಮ ಸಂಗ್ರಹ; ಉದ್ಯಮಿ ಕಲ್ರಾಗೆ ಜಾಮೀನು ನಿರಾಕರಣೆ

ಇದರ ಬೆನ್ನಲ್ಲೇ ನವನೀತ್ ಕಲ್ರಾ ಪರಾರಿಯಾಗಿದ್ದು, ಪ್ರಕರಣ ಸಂಬಂಧ ಕಲ್ರಾಗೆ ಮಧ್ಯಂತರ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಇದೀಗ ಕಲ್ರಾರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ABOUT THE AUTHOR

...view details