ಪುಣೆ(ಮಹಾರಾಷ್ಟ್ರ): ಉಗ್ರ ಸಂಘಟನೆಯೊಂದಿಗೆ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ಪುಣೆಯ ಕೊಂದ್ವಾ ಪ್ರದೇಶದಲ್ಲಿಂದು ರಾಷ್ಟ್ರೀಯ ತನಿಖಾ ದಳ-ಎನ್‌ಐಎ ದಾಳಿ ನಡೆಸಿದ್ದು, 38 ವರ್ಷದ ತಲ್ಹಾ ಖಾನ್ ಎಂಬುವರ ಮನೆಯಲ್ಲಿ ಶೋಧ ನಡೆಸಿದೆ.
ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ದಾಖಲೆಗಳು ಹಾಗೂ ಕೆಲ ಡಿಜಿಟಲ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಲ್ಹಾ ಖಾನ್ ಖುರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಇದರ ಸಿದ್ಧಾಂತಗಳನ್ನು ಪ್ರಚಾರದ ಕೆಲಸ ಮಾಡುತ್ತಿದ್ದ ಎಂದು ಎನ್ಐಎ ಶಂಕಿಸಿದೆ.
ಸಾದಿಯಾ ಅನ್ವರ್ ಶೇಖ್ ಮತ್ತು ನಬಿಲ್ ಸಿದ್ದಿಕಿ ಖತ್ರಿ ಎಂಬುವವರನ್ನು 2020ರ ಜುಲೈನಲ್ಲಿ ಬಂಧಿಸಿತ್ತು. ನಬಿಲ್ ಸಿದ್ದಿಕಿ ಖತ್ರಿ ಅವರೊಂದಿಗೆ ತಲ್ಹಾ ಖಾನ್ ಸಂಪರ್ಕದಲ್ಲಿದ್ದ ಎಂಬುದನ್ನು ಎನ್ಐಎ ಪತ್ತೆ ಮಾಡಿದ ನಂತರ ಈ ದಾಳಿ ನಡೆಸಿದೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಅಗ್ನಿ ಅನಾಹುತಕ್ಕೆ ಎಂಟು ತಿಂಗಳ ಮಗು ಸೇರಿ ಐವರು ಸಜೀವ ದಹನ