ಕರ್ನಾಟಕ

karnataka

ETV Bharat / crime

2 ದಶಕಗಳ ಹಳೆಯ ಸೇಡಿಗೆ ಮದುವೆಯಾಗಿದ್ದ ಪ್ರಕರಣ: ಮಂಗಳೂರಿನಲ್ಲಿ ನವ ಜೋಡಿ ಬಂಧನ - ಮಂಗಳೂರು ಕ್ರೈಮ್‌ ಸುದ್ದಿ

ನವ ಜೋಡಿಯ ವಿರುದ್ಧ 50 ಸಾವಿರ ರೂ. ನಗದು ಹಾಗೂ 60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಆರೋಪದ ಮೇಲೆ ದೂರು ದಾಖಲಾಗಿತ್ತು. ಸದ್ಯ ಮಂಗಳೂರು ಬರ್ಕೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ..

new couple arrested in mangalore, dakshina kannada district
2 ದಶಗಳ ಹಳೆಯ ಸೇಡಿಗೆ ಮದುವೆಯಾಗಿದ್ದ ಪ್ರಕರಣ; ಮಂಗಳೂರಿನಲ್ಲಿ ನವ ಜೋಡಿ ಬಂಧನ

By

Published : Sep 11, 2021, 10:10 PM IST

Updated : Sep 11, 2021, 10:24 PM IST

ಮಂಗಳೂರು : 22 ವರ್ಷಗಳ ಹಳೆಯ ಸೇಡಿಗೆ ಮದುವೆ ಮಾಡಿಸಿದ್ದ ಪ್ರಕರಣದಲ್ಲಿ ನವ ದಂಪತಿಯನ್ನು ಮಂಗಳೂರಿನ ಪೊಲೀಸರು ಕಳವು ಆರೋಪದ ಮೇಲೆ ಬಂಧಿಸಿದ್ದಾರೆ. ರೇಷ್ಮಾ, ಅಕ್ರಮ್‌ ಎಂಬುವರು ಬಂಧಿತ ಆರೋಪಿಗಳು.

ಬಂಧಿತ ರೇಷ್ಮಾ ತಮ್ಮ ಚಿಕ್ಕಮ್ಮನ ಪುತ್ರ, ಗದಗ್‌ನ ಅಕ್ರಮ್‌ನೊಂದಿಗೆ ವಿವಾಹವಾಗಿದ್ದಳು. ಮದುವೆಗೂ ಮುನ್ನ ಮನೆಯಿಂದ ಬರುವಾಗ ಚಿನ್ನಾಭರಣ, ಹಣ ತರುವಂತೆ ಅಕ್ರಮ್‌ ಕುಟುಂಬಸ್ಥರು ಹೇಳಿದ್ದಾರೆ. ಇವರ ಮಾತಿನಂತೆ ಹಣ ಹಾಗೂ ಚಿನ್ನಾಭರಣ ಸಮೇತ ಬಂದಿದ್ದ ಈಕೆ ಆ ಬಳಿಕ ನಾಪತ್ತೆಯಾಗಿ ವಿವಾಹವಾಗಿದ್ದರು.

ನವ ಜೋಡಿಯ ವಿರುದ್ಧ 50 ಸಾವಿರ ರೂ. ನಗದು ಹಾಗೂ 60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಆರೋಪದ ಮೇಲೆ ದೂರು ದಾಖಲಾಗಿತ್ತು. ಸದ್ಯ ಮಂಗಳೂರು ಬರ್ಕೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:ವಿರೋಧದ ನಡುವೆ ಮಗಳ ಮದುವೆಗೆ ಕೋಪ: 22 ವರ್ಷದ ಬಳಿಕೆ ಆಕೆಯ ಮಗಳಿಂದ ಸೇಡು ತೀರಿಸಿಕೊಂಡ ಕುಟುಂಬ

Last Updated : Sep 11, 2021, 10:24 PM IST

ABOUT THE AUTHOR

...view details