ಲಖನೌ(ಉತ್ತರಪ್ರದೇಶ): ಇಲ್ಲಿನ ಕೃಷ್ಣನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೇಮ್ ನಗರದ ನಿವಾಸಿಗೆ ಶುಕ್ರವಾರ ದಿವಸ ತನ್ನ ನೆರೆಹೊರೆಯವರ ನಾಯಿಯೊಂದು ಕಚ್ಚಿದೆ. ನಾಯಿ ಕಡಿತದಿಂದಾಗಿ ಯುವಕನಿಗೆ ತೀವ್ರ ಗಾಯವಾಗಿದೆ.
ಖಾಸಗಿ ಭಾಗಕ್ಕೆ ಕಚ್ಚಿಸಿಕೊಂಡು ಗಾಯಗೊಂಡ ಯುವಕ, ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೂಡಾ ಪಡೆಯುತ್ತಿದ್ದಾನೆ. ಸಂತ್ರಸ್ತನ ಮಾಹಿತಿ ಮೇರೆಗೆ ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ಕೂಡಾ ದಾಖಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನು ಯುವಕನ ಮೇಲೆ ದಾಳಿ ನಡೆಸಿದ ನಾಯಿ ಮಾಲೀಕ ಪ್ರೇಮ್ ನಗರದ ನಿವಾಸಿ ಶಂಕರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದೇ ವೇಳೆ, ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ನಾಯಿಯನ್ನು ಪುರಸಭೆ ಸಿಬ್ಬಂದಿ ಕೈಗೆ ಒಪ್ಪಿಸಲಾಗಿದೆ. ಇಂದಿರಾನಗರದಲ್ಲಿರುವ ಗರರಾ ಡಾಗ್ ಸೆಂಟರ್ಗೆ ನಾಯಿಯನ್ನು ರವಾನಿಸಲಾಗಿದೆ.
ಒಟ್ಟಾರೆ ನಡೆದಿದ್ದೇನು?: ಮೂಲತಃ ಪ್ರೇಮ್ ನಗರದ ನಿವಾಸಿ ಸಂಕಲ್ಪ ನಿಗಮ್ ಶುಕ್ರವಾರ ರಾತ್ರಿ 10 ಗಂಟೆಗೆ ಜಾಗರಣ್ ಅವರನ್ನು ಭೇಟಿ ಮಾಡಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಪಕ್ಕದ ಮನೆಯ ಶಂಕರ್ ಎಂಬ ಯುವಕನ ಸಾಕುನಾಯಿ ಸಂಕಲ್ಪನ ಖಾಸಗಿ ಭಾಗಕ್ಕೆ ಕಚ್ಚಿದೆ. ನಾಯಿಯ ದಿಢೀರ್ ದಾಳಿಯಿಂದಾಗಿ ಸಂಕಲ್ಪ್ ತೀವ್ರವಾಗಿ ಗಾಯಗೊಂಡಿದ್ದಾರೆ. ಸಂಕಲ್ಪ ಮೇಲೆ ನಾಯಿ ದಾಳಿ ಮಾಡುತ್ತಿದ್ದಾಗ ಅದರ ಮಾಲೀಕ ಶಂಕರ್ ಅಲ್ಲಿಯೇ ಇದ್ದ ಎಂದು ಹೇಳಲಾಗುತ್ತಿದ್ದು, ಸಂಕಲ್ಪನನ್ನು ಆತ ಬಿಡಿಸಿಕೊಳ್ಳಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.
ಇನ್ನು ನಾಯಿಯ ಕಡಿತದಿಂದ ಗಾಯಗೊಂಡಿದ್ದ ಸಂಕಲ್ಪ ಸ್ಥಳೀಯ ಲೋಕಬಂಧು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ನಾಯಿಯ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಂಕಲ್ಪನನ್ನು ಲೋಕಬಂಧು ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ರೆಪರ್ ಮಾಡಿದ್ದರು. ಹೀಗಾಗಿ ಅವರು ವೈದ್ಯಕೀಯ ಕಾಲೇಜಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಕಲ್ಪನಿಗೆ 2 ದಿನಗಳ ಚಿಕಿತ್ಸೆ ಅವಶ್ಯಕತೆ ಇದೆ. ನಾಯಿಯ ದಾಳಿಯಿಂದಾಗಿ ಅವರ ಮೂತ್ರಕೋಶದ ಟ್ಯೂಬ್ಗೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಅದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸರು ಹೇಳುವುದೇನು?:ದಾಳಿಗೆ ಒಳಗಾದ ಸಂಕಲ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷ್ಣನಗರ ಪೊಲೀಸ್ ಠಾಣೆ ಪ್ರಭಾರಿ ಅಲೋಕ್ ರೈ ತಿಳಿಸಿದ್ದಾರೆ. ಇತ್ತೀಚೆಗೆ, ರಾಜಧಾನಿಯ ಕೈಸರ್‌ಬಾಗ್‌ನ ನಿವಾಸಿ ನಿವೃತ್ತ ಶಿಕ್ಷಕಿ ಸುಶೀಲಾ ತಿವಾರಿ ಅವರು ಸಾಕು ನಾಯಿ ದಾಳಿಯಿಂದ ಮೃತಪಟ್ಟಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಇದನ್ನು ಓದಿ:ರಾಜಸ್ಥಾನದಲ್ಲಿ ರೈಲಿಗೆ ಸಿಲುಕಿ ಇಬ್ಬರು ತೃತೀಯ ಲಿಂಗಿಗಳ ದುರ್ಮರಣ