ಕರ್ನಾಟಕ

karnataka

ETV Bharat / crime

ಬೆಚ್ಚಿಬಿದ್ದ ಬೆಂಗಳೂರು, ಇಬ್ಬರು ಹೆಣ್ಣುಮಕ್ಕಳ ಎದುರೇ ತಂದೆಯ ಹತ್ಯೆ - ಬೆಂಗಳೂರು ಕ್ರೈಮ್ ನ್ಯೂಸ್‌

ಇಬ್ಬರು ಹೆಣ್ಣುಮಕ್ಕಳ ಎದುರೇ ತಂದೆಯೊಬ್ಬರನ್ನು ಹತ್ಯೆ (Murder in Bengaluru) ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವೀರ್ ಸಾಗರ್ ರಸ್ತೆಯಲ್ಲಿ ನಡೆದಿದೆ.

murder of the father in front of two daughters In Bangalore
ಬೆಚ್ಚಿ ಬಿದ್ದ ಬೆಂಗಳೂರು; ಇಬ್ಬರು ಹೆಣ್ಣುಮಕ್ಕಳ ಎದುರೇ ತಂದೆಯ ಹತ್ಯೆ

By

Published : Nov 22, 2021, 1:34 PM IST

Updated : Nov 22, 2021, 5:03 PM IST

ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳ ಮುಂದೆಯೇ ತಂದೆಯನ್ನು ಭೀಕರ ಹತ್ಯೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವೀರ್ ಸಾಗರ್ ರಸ್ತೆಯಲ್ಲಿ ನಡೆದಿದ್ದು, ಸಿಲಿಕಾನ್‌ ಸಿಟಿ ಬೆಚ್ಚಿಬಿದ್ದಿದೆ.


ನಿನ್ನೆ ತಡರಾತ್ರಿ 1:30ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಾಂಗ್​ನಿಂದ ದೀಪಕ್ ಕುಮಾರ್ ಸಿಂಗ್ (46) ಎಂಬುವರನ್ನು ಕೊಲೆ ಮಾಡಿದ್ದಾರೆ. ಮೃತ ದೀಪಕ್ ಕುಮಾರ್ ಸಿಂಗ್ ಮೂಲತಃ ಬಿಹಾರದವರಾಗಿದ್ದರು. ಜಿಕೆವಿಕೆನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ ಯಲಹಂಕ ನ್ಯೂ ಟೌನ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೃತರ ಪತ್ನಿ ಇತ್ತೀಚೆಗೆ ಬಿಹಾರದ ತವರು ಮನೆಗೆ ತೆರಳಿದ್ದಳು.

ದೀಪಕ್ ಕುಮಾರ್ ಸಿಂಗ್ ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಿದ್ದರು. ನಿನ್ನೆ ಏಕಾಏಕಿ ಮನೆಗೆ ನುಗ್ಗಿರುವ ನಾಲ್ವರು ಹಂತಕರು ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮುಂದೆಯೇ ತಂದೆಯ ಕೊಲೆ ನಡೆದಿದೆ. ಕೃತ್ಯದ ವೇಳೆ ಆರೋಪಿಗಳು ಮಕ್ಕಳ ಕುತ್ತಿಗೆಗೂ ಲಾಂಗ್ ಇಟ್ಟು ಬೆದರಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳ‌ ಸುಳಿವು ದೊರೆತಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಈಶಾನ್ಯ ವಿಭಾಗದ ಡಿಸಿಪಿ‌ ಸಿ.ಕೆ.ಬಾಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ದೀಪಕ್ ಎರಡು ಮದುವೆಯಾಗಿದ್ದ. ಬಿಹಾರದಲ್ಲಿ ಮತ್ತೊಬ್ಬ ಪತ್ನಿ ವಾಸವಾಗಿದ್ದಳು. ನಗರದಲ್ಲಿ ಮತ್ತೋರ್ವ ಪತ್ನಿ ಹಾಗೂ‌‌ ಮಕ್ಕಳ ಸಮೇತ ವಾಸವಾಗಿದ್ದ. ‌

ಮಗಳ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಕೃತ್ಯ ?

ಮೃತ ದೀಪಕ್‌ ಯಾರೊಂದಿಗೂ ಹಳೆ ವೈಷ್ಯಮ್ಯ ಹೊಂದಿರಲಿಲ್ಲ. ಕಳೆದ‌ ಒಂದೂವರೆ ವರ್ಷಗಳಿಂದ ಮಗಳ‌‌ ಮೇಲೆ‌ ದೌರ್ಜನ್ಯ ಎಸಗುತ್ತಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ‌ ತಿಳಿದು ಬಂದಿದೆ. ಪುತ್ರಿ ತನ್ನ ತಾಯಿಯೊಂದಿಗೆ ಈ ವಿಚಾರವನ್ನು ತಿಳಿಸಿದ್ದಳು. ಇದೇ ವಿಚಾರಕ್ಕಾಗಿ ಮನೆಯಲ್ಲಿ ದಂಪತಿ ನಡುವೆ ಕಲಹ ಏರ್ಪಟ್ಟಿತ್ತು.

ಯುವತಿ ಸಹ ಕಾಲೇಜು ಸ್ನೇಹಿತರೊಂದಿಗೆ ಅಳಲು ತೋಡಿಕೊಂಡಿದ್ದಳಂತೆ. ನಿನ್ನೆ ಕುಡಿದ ಮತ್ತಿನಲ್ಲಿ ಮತ್ತೆ‌ ಮಗಳ‌ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದ ಎನ್ನಲಾಗಿದೆ. ಮಾಹಿತಿ ಅರಿತ ದುಷ್ಕರ್ಮಿಗಳು ದೀಪಕ್ ನನ್ನ ಕೊಲೆ ಮಾಡಿದ್ದಾರೆ ಎಂದು‌ ಮೂಲಗಳಿಂದ ತಿಳಿದುಬಂದಿದೆ. ಆರೋಪಿಗಳ ಬಂಧನ ಬಳಿಕ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ.

ಇದನ್ನೂ ಓದಿ:ಮೈದುನನೊಂದಿಗೆ ವಿವಾಹೇತರ ಸಂಬಂಧ: ನೀರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿ ಕೊಲ್ಲಲು ಯತ್ನಿಸಿದ ಪತ್ನಿ ಅರೆಸ್ಟ್​

Last Updated : Nov 22, 2021, 5:03 PM IST

ABOUT THE AUTHOR

...view details