ಮುಂಬೈ: ಮುಖೇಶ್ ಅಂಬಾನಿ ನಿವಾಸದ ಬಳಿಕ ಜಿಲೆಟಿನ್ ತುಂಬಿದ್ದ ಕಾರು ಪತ್ತೆ ಹಾಗೂ ಕಾರಿನ ಚಾಲಕ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಎನ್‌ಕೌಂಟರ್ ಆರೋಪಿ ಪ್ರದೀಪ್ ಶರ್ಮಾ ಸೇರಿ ಇಬ್ಬರು ಆರೋಪಿಗಳನ್ನು ಜೂನ್ 28 ರವರೆಗೆ ಎನ್‌ಐಎ ವಶಕ್ಕೆ ನೀಡಿ ಎನ್‌ಐಎ ವಿಶೇಷ ಕೋರ್ಟ್ ಆದೇಶ ನೀಡಿದೆ.
ಪ್ರದೀಪ್ ಶರ್ಮಾ ಎನ್‌ಐಎ ರಿಮ್ಯಾಂಡ್ ನೀಡುವುದನ್ನು ಶರ್ಮಾ ಪರ ವಕೀಲರು ವಿಚಾರಣೆ ವೇಳೆ ವಿರೋಧಿಸಿದ್ದಾರೆ. ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಅವರೊಂದಿಗೆ ಯಾವುದೇ ಸಂಬಂಧ ಅಥವಾ ಸಂಪರ್ಕವಿಲ್ಲ ಎಂದು ವಾದಿಸಿದ್ದಾರೆ.
ಅಂಧೇರಿಯಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅವರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿತ್ತು. ಈ ವೇಳೆ, ಶರ್ಮಾ ಅವರನ್ನು ಬಂಧಿಸಲಾಗಿತ್ತು. ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಕೋವಿಡ್ ಪರೀಕ್ಷೆ ನಂತರ ಅವರನ್ನು ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ:ಕೋವಿಡ್ ಟೂಲ್ ಕಿಟ್ ವಿವಾದ: ದೆಹಲಿ ಪೊಲೀಸರಿಂದ ಟ್ವಿಟರ್ ಎಂಡಿ ವಿಚಾರಣೆ..!
ಏಪ್ರಿಲ್‌ನಲ್ಲಿ ಪ್ರದೀಪ್ ಶರ್ಮಾ ಅವರನ್ನು ಎನ್‌ಐಎ ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಲೋನಾವಾಲಾದ ರೆಸಾರ್ಟ್‌ನಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಸಚಿನ್ ವಾಜೆ, ವಿನಾಯಕ್ ಶಿಂದ್, ರಿಯಾಜ್ ಖಾಜಿ, ಸುನಿಲ್ ಮಾನೆ, ನರೇಶ್ ಗೋರ್, ಸಂತೋಷ್ ಶೆಲಾರ್, ಆನಂದ್ ಜಾಧವ್ ಮತ್ತು ಈಗ ಪ್ರದೀಪ್ ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.