ಮುಂಬೈ(ಮಹಾರಾಷ್ಟ್ರ): 1992ರ ಗಲಭೆ ಪ್ರಕರಣದ ಆರೋಪಿಯೊಬ್ಬ ವೇಷ ಬದಲಿಸಿಕೊಂಡು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಳ್ಳುತ್ತಿದ್ದ. 47 ವರ್ಷದ ಈ ಆರೋಪಿಯನ್ನು ಕೊನೆಗೂ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅದು ಬರೋಬ್ಬರಿ 30 ವರ್ಷಗಳ ಬಳಿಕ ಅನ್ನೋದು ವಿಶೇಷ.
1992 ರಲ್ಲಿ ದಿಂಡೋಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆಯೊಂದು ನಡೆದಿತ್ತು. ಈ ವೇಳೆ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಪೊಲೀಸರು ಒಂಬತ್ತು ಆರೋಪಿಗಳನ್ನು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.