ಭೋಪಾಲ್ (ಮಧ್ಯ ಪ್ರದೇಶ): ವೈಫ್ ಸ್ವ್ಯಾಪಿಂಗ್ ಆಟದಲ್ಲಿ (ಹೆಂಡತಿಯರನ್ನು ಬದಲಾಯಿಸಿಕೊಳ್ಳುವ ಲೈಂಗಿಕ ಆಟ) ಪಾಲ್ಗೊಳ್ಳದ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಪತಿಯಿಂದಲೇ ದೌರ್ಜನ್ಯಕ್ಕೊಳಗಾದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಹೋಟೆಲ್ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಭೋಪಾಲ್‌ನಲ್ಲಿ ಪ್ರಕರಣ ದಾಖಲಾಗಿದೆ. ವರದಿಗಳ ಪ್ರಕಾರ, ದೂರುದಾರರ ಪತಿ ಬಿಕಾನೇರ್‌ನ 5-ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದಾರೆ.
ಪೊಲೀಸರಿಗೆ ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಪತಿ ತನ್ನನ್ನು ಬಿಕಾನೇರ್‌ನ ಹೋಟೆಲ್ ಕೋಣೆಯಲ್ಲಿ ಲಾಕ್ ಮಾಡಿ ಫೋನ್ ಕಸಿದುಕೊಂಡರು. ಎರಡು ದಿನಗಳ ನಂತರ ಆತ ವಿಪರೀತ ಅಮಲೇರಿದ ಸ್ಥಿತಿಯಲ್ಲಿ ಕೋಣೆಗೆ ಬಂದ. ಮದ್ಯಪಾನ, ಡ್ರಗ್ಸ್ ಸೇವನೆ, ಬೇರೆ ಬೇರೆ ಹುಡುಗಿಯರ ಜೊತೆ ಶಾರೀರಿಕ ಸಂಬಂಧ ಬೆಳೆಸುವುದು, ಹುಡುಗರ ಜೊತೆ ಸೆಕ್ಸ್ ಮಾಡುವುದು ಇವೆಲ್ಲವೂ ಆತನಿಗೆ ದಿನನಿತ್ಯ ಜೀವನದ ಭಾಗವೇ ಆಗಿದ್ದವು. ಹೀಗಾಗಿ ಆತ ತನ್ನನ್ನು ವೈಫ್ ಸ್ವಾಪ್ ಆಟದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದ. ನಾನು ಆಟದ ಭಾಗವಾಗಲು ನಿರಾಕರಿಸಿದಾಗ, ಆತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನ್ನನ್ನು ಅಸಂಸ್ಕೃತಳು ಎಂದು ಕರೆದು ನನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಎಂದು ಸಂತ್ರಸ್ತೆ ದೂರಿದ್ದಾರೆ. ಪತಿಯ ದೌರ್ಜನ್ಯದಿಂದ ತನಗೆ ವಿಪರೀತ ಗಾಯಗಳಾಗಿವೆ. ಅಷ್ಟಾದರೂ ವೈಫ್ ಸ್ವ್ಯಾಪಿಂಗ್ ಆಟದಲ್ಲಿ ಭಾಗವಾಗಲು ನಾನು ಒಪ್ಪಿಲ್ಲ ಎಂದು ನೊಂದ ಮಹಿಳೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.