ಬೆಂಗಳೂರು :ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆಗೆ ಯತ್ನಿಸಿದವನ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓದಿ: ಮಣಿಪಾಲ್ ಆಸ್ಪತ್ರೆಯಲ್ಲಿ ರೆಡಿಯಾಯ್ತು ಸ್ಪುಟ್ನಿಕ್ ವಿ ಪೈಲಟ್ ವ್ಯಾಕ್ಸಿನ್ : ಜೂನ್ ಅಂತ್ಯದಲ್ಲಿ ಲಭ್ಯ

ಶಿವಲಿಂಗಯ್ಯ ಎಂಬಾತ ಕೋವಿಡ್ ಸೋಂಕಿತರ ಕಡೆಯವರಿಗೆ ವಂಚಿಸಲು ಯತ್ನಿಸಿದ್ದಾನೆ. ಆರೋಪಿ ಶಿವಲಿಂಗಯ್ಯ ತಾನು ತೇಜಸ್ವಿಸೂರ್ಯ ಪಿಎ ಎಂದು ಸಾರ್ವಜನಿಕರ ಬಳಿ ಮಾತನಾಡಿ, 10 ಸಾವಿರ ನೀಡಿದರೆ, 5 ರೆಮ್ಡಿಸಿವರ್ ಒದಗಿಸುವುದಾಗಿ ಹೇಳಿದ್ದಾನೆ.
ಇನ್ನು, ಈ ವಿಷಯವನ್ನ ತೇಜಸ್ವಿಸೂರ್ಯ ಅವರ ಕಚೇರಿ ಗಮನಕ್ಕೆ ಸೋಂಕಿತನ ಕಡೆಯವರು ತಂದಿದ್ದಾರೆ. ಸಂಸದರ ಕಚೇರಿಯಿಂದ ಆರೋಪಿಗೆ ಪರೀಕ್ಷಿಸಲು ಕರೆ ಮಾಡಿದಾಗಲೂ ತಾನು ಸಂಸದರ ಪಿಎ ಎಂದು ಹೇಳಿದ್ದಾನೆ. ಕೂಡಲೇ ಆರೋಪಿ ವಿರುದ್ಧ ತೇಜಸ್ವಿಸೂರ್ಯರ ಆಪ್ತ ಸಹಾಯಕ ಭಾನುಪ್ರಕಾಶ್ ದೂರು ನೀಡಿದ್ದು, ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.