ಜಮ್ಮು ಮತ್ತು ಕಾಶ್ಮೀರ:ಸಾರ್ವಜನಿಕ ರ‍್ಯಾಲಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಡಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಸದ ಅಕ್ಬರ್ ಲೋನೆ ಅವರ ಪುತ್ರ ಹಿಲಾಲ್ ಅಕ್ಬರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಡಿಸಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜಮ್ಮು - ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ದ್ವೇಷದ ಮನೋಭಾವ ಬಿತ್ತುವ, ಗಲಭೆಗೆ ಕುಮ್ಮಕ್ಕು ನೀಡುವ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಲ್ಎ) ಅಡಿ ಇಂದು ಕೇಸ್ ದಾಖಲಿಸಲಾಗಿದೆ.