ನವದೆಹಲಿ :ವಾರ್ಡರ್ ತಪಾಸಣೆಗೆ ಬರ್ತಾರೆಂದು ಹೆದರಿ ಇತರ ಕೈದಿಗಳ ಮುಂದೆಯೇ ಕೈದಿಯೊಬ್ಬ ಮೊಬೈಲ್ ನುಂಗಿರುವ ಘಟನೆ ತಿಹಾರ್ ಜೈಲಿನಲ್ಲಿ ನಡೆದಿದೆ. 10 ದಿನಗಳ ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ ಮೊಬೈಲ್ ಅನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಘಟನೆಯಿಂದ ಒಂದು ಕ್ಷಣ ಅಚ್ಚರಿಗೊಂಡ ಇತರೆ ಕೈದಿಗಳು ಕೂಡಲೇ ಮೊಬೈಲ್ ನುಂಗಿದ ಕೈದಿಯನ್ನು ಜೈಲಿನಲ್ಲಿರುವ ಆಸ್ಪತ್ರೆಗೆ ಸೇರಿದ್ದರು. ಕೈದಿಯ ಸ್ಥಿತಿ ಗಂಭೀರವಾದ ಹಿನ್ನೆಲೆ ತಕ್ಷಣ ಆತನನ್ನು ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಎಕ್ಸ್-ರೇ ನಂತರ ಹೊಟ್ಟೆಯಲ್ಲಿ ಮೊಬೈಲ್ ಇರುವುದು ದೃಢಪಟ್ಟಿತ್ತು.
ನಿರಂತರ ಪರಿಶ್ರಮದಿಂದ 10 ದಿನಗಳ ನಂತರ ಹೊಟ್ಟೆಯಲ್ಲಿದ್ದ ಮೊಬೈಲ್ ತೆಗೆಯುವಲ್ಲಿ ವೈದ್ಯರುಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ತಿಹಾರ್ ಜೈಲು ಡಿಜಿ ಸಂದೀಪ್ ಗೋಯಲ್, ಮೊಬೈಲ್ ನುಂಗಿದ ಕೈದಿಯನ್ನು ಘಟನೆಯ ನಂತರ ಡಿಡಿಯುನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ದಾಖಲಿಸಲಾಯಿತು.
ಶಸ್ತ್ರಚಿಕಿತ್ಸೆ ಇಲ್ಲದೆ ಮೊಬೈಲ್ ಹೊರ ತೆಗೆಯುವ ಪ್ರಯತ್ನವನ್ನು ವೈದ್ಯರು ಮಾಡಿದ್ದರು. ಶಸ್ತ್ರ ಚಿಕಿತ್ಸೆ ನಡೆಸದೆ ಜ.15ರಂದು ವೈದ್ಯರು ಮೊಬೈಲ್ ಅನ್ನು ಹೊಟ್ಟೆಯಿಂದ ಹೊರ ತೆಗೆದಿದ್ದು, ಈಗ ಕೈದಿಯ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಮತ್ತೆ ಆತನನ್ನು ಜೈಲಿಗೆ ಕಳುಹಿಸಲಾಗಿದೆ.