ಮುಂಬೈ (ಮಹಾರಾಷ್ಟ್ರ): ಸೆಂಟ್ರಲ್ ಮುಂಬೈನ ಲೋವರ್ ಪರೇಲ್ ಪ್ರದೇಶದಲ್ಲಿ ಆರು ಮಂದಿ ಆರೋಪಿಗಳು 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಸ್ನೇಹಿತನೂ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಮೂವರು ಅಪ್ರಾಪ್ತರೆಂದು ತಿಳಿದುಬಂದಿದೆ.
ಆರೋಪಿಗಳಲ್ಲಿ ಒಬ್ಬ ಸಂತ್ರಸ್ತೆಯ ಸ್ನೇಹಿತ. ಈ ಇಬ್ಬರೂ ಸೇರಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಚಾಲ್ ಎಂಬಲ್ಲಿಗೆ ಹೋಗಿದ್ದರು. ಇದೇ ಪ್ರದೇಶಕ್ಕೆ ಇತರೆ ಐವರು ಆರೋಪಿಗಳೂ ಬಂದಿದ್ದರು. ರಾತ್ರಿ ವೇಳೆ ಚಾಲ್‌ನ ನಿವಾಸಿಗಳು ಬಾಲಕಿಯ ಕೂಗು ಕೇಳಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.