ಕರ್ನಾಟಕ

karnataka

ETV Bharat / crime

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 19 ವರ್ಷದ ಯುವಕ - etv bharat kannada

ಬಾಲಕಿ ಆಟವಾಡುತ್ತಿದ್ದ ವೇಳೆ ಅವಳನ್ನು ಲಿಫ್ಟ್​ನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಎಸ್​​ಐ ಜೆ ಸೋನವಾನೆ ತಿಳಿಸಿದ್ದಾರೆ.

minor-girl-sexually-assaulted-by-a-19-yr-old-man-in-maharashtra
ಮಹಾರಾಷ್ಟ್ರ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 19 ವರ್ಷದ ಯುವಕ

By

Published : Dec 9, 2022, 12:03 PM IST

ರಾಯಗಡ(ಮಹಾರಾಷ್ಟ್ರ): 5 ವರ್ಷದ ಬಾಲಕಿಯ ಮೇಲೆ 19 ವರ್ಷದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ರಾಯಗಡ ಜಿಲ್ಲೆಯ ತಲೋಜಾದಲ್ಲಿ ನಡೆದಿದೆ.

ಆರೋಪಿ ಮೊಹಮ್ಮದ್ ಅಖ್ತರ್ ಮಾಥರ್ ಹುಸೇನ್ ಎಂಬಾತ ಎಸಿ ಮೆಕ್ಯಾನಿಕ್​ ಆಗಿದ್ದ. ಬಾಲಕಿ ಆಟವಾಡುತ್ತಿದ್ದ ವೇಳೆ ಆಕೆಯನ್ನು ಲಿಫ್ಟ್​ನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಎಸ್​​ಐ ಜೆ ಸೋನವಾನೆ ತಿಳಿಸಿದ್ದಾರೆ.

ಬಾಲಕಿ ಮನೆಗೆ ಬಂದು ವಾಂತಿ ಮಾಡಲು ಪ್ರಾರಂಭಿಸಿದ್ದಾಳೆ. ಆಕೆಯ ತಾಯಿ ಕೇಳಿದ ಮೇಲೆ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಆಕೆಯ ಪೋಷಕರು ಮತ್ತು ನೆರೆಹೊರೆಯವರು ಸೇರಿ ಆರೋಪಿಯನ್ನು ಹಿಡಿದಿದ್ದಾರೆ. ಸಂತ್ರಸ್ತ ಬಾಲಕಿ ಆತನನ್ನು ಗುರುತಿಸಿದ್ದು, ಬಂಧಿಸಲಾಗಿದೆ ಎಂದು ಸೋನಾವನೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಇನ್​​​ಸ್ಟಾದಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಬಾಲಕನ ವಿರುದ್ಧ ಪೋಕ್ಸೋ ಕೇಸು

ABOUT THE AUTHOR

...view details