ಸತಾರಾ( ಮಹಾರಾಷ್ಟ್ರ): ಸತಾರಾದಲ್ಲಿ ಒಂದೂವರೆ ವರ್ಷದ ಮಗುವೊಂದರ ಗಂಟಲೊಳಗೆ ಚಾಕೊಲೇಟ್ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಮಗುವನ್ನು ಶಾರ್ವರಿ ಸುಧೀರ್ ಜಾಧವ್ ಎಂದು ಗುರುತಿಸಲಾಗಿದೆ. ಮಗು ಚಾಕೊಲೇಟ್ ನುಂಗಿ ಒದ್ದಾಡುತ್ತಿರುವುದನ್ನು ಕಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಜೀವಕ್ಕೆ ಕುತ್ತು ತಂದ ಚಾಕೊಲೇಟ್:ಪುಟ್ಟ ಶಾರ್ವರಿಗೆ ನೆರೆಮನೆಯ ಹುಡುಗಿ ಜೆಲ್ಲಿ ಚಾಕೊಲೇಟ್ ಕೊಟ್ಟಿದ್ದಳು. ಆ ಚಾಕೊಲೇಟ್ ಅನ್ನು ಸಂತಸದಿಂದ ಬಾಯಲ್ಲಿ ಇಟ್ಟುಕೊಂಡಿದ್ದಳು. ಆ ಚಾಕೊಲೇಟ್ ಇದ್ದಕ್ಕಿದ್ದಂತೆ ಆಕೆಯ ಗಂಟಲೊಳಗೆ ಸಿಲುಕಿಕೊಂಡಿದೆ. ಚಾಕೊಲೇಟ್ ಗಂಟಲಿಗೆ ಸಿಕ್ಕಿ ಕೆಮ್ಮಲು ಆರಂಭಿಸಿದ್ದಾಳೆ. ತಕ್ಷಣವೇ ಅವಳು ಪ್ರಜ್ಞೆ ಸಹ ಕಳೆದುಕೊಂಡಿದ್ದಾಳೆ. ಇದನ್ನು ಗಮನಿಸಿದ ಆಕೆಯ ತಾಯಿ ಅಕ್ಕಪಕ್ಕದ ಮನೆಯವರಿಗೆ ಕರೆ ಮಾಡಿ ಕೂಡಲೇ ಶಾರ್ವರಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.